ವ್ಯಕ್ತಿಯೊಬ್ಬರ ಮೇಲೆ ಫೈರಿಂಗ್ ಮಾಡಿದ ಆಪಾದನೆ ಮೇಲೆ ಓರ್ವ ಯುವತಿ ಹಾಗೂ ಆಕೆಯ ಇಬ್ಬರು ಸಹಚರರನ್ನು ಪೊಲೀಸರು ಬಂಧಿಸಿದ ಘಟನೆ ಇಂದೋರ್ನಲ್ಲಿ ಜರುಗಿದೆ.
ನಗರದ ಆಜ಼ಾದ್ ನಗರ ಪ್ರದೇಶದಲ್ಲಿ ಈ ಘಟನೆ ಜರುಗಿದೆ. ಮಂಗಳವಾರ ರಾತ್ರಿ ಆಲಿಶಾ ಹೆಸರಿನ ಯುವತಿಯೊಬ್ಬಳು ತಮಗೆ ವ್ಯಕ್ತಿಯೊಬ್ಬರು ಗುಂಡು ಹಾರಿಸಿದ್ದಾರೆ ಎಂದು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದಾಳೆ. ಆಶು ಹೆಸರಿನ ಯುವತಿ ತನಗೆ ಗುಂಡು ಹಾರಿಸಿರುವುದಾಗಿ ಆಲಿಶಾ ಹೇಳಿಕೊಂಡಿದ್ದಾಳೆ.
ಒಂದು ಕಾಲಿಗೆ ಗುಂಡೇಟು ತಿಂದಿದ್ದ ಆಲಿಶಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ಇನ್ನಷ್ಟು ತನಿಖೆ ನಡೆಸಿದ ಪೊಲಿಸರಿಗೆ ಆಲಿಶಾಳ ಖತರ್ನಾಕ್ ನೌಂಟಂಕಿ ತಿಳಿದು ಬಂದಿದೆ.
ಅಸಲಿಗೆ ಆಶುರ ಮನೆಗೆ ತೆರಳಿದ್ದ ಆಲಿಶಾ ಹಾಗೂ ಆಕೆ ಸ್ನೇಹಿತರಾದ ಮೊಹಮ್ಮದ್ ಕೈಫ್ ಹಾಗೂ ಮೋಯಿನ್, ಆಶುರೊಂದಿಗೆ ಹಣಕಾಸಿನ ವಿಚಾರದಲ್ಲಿ ವಾಗ್ವಾದಕ್ಕಿಳಿದಿದ್ಧಾರೆ. ಈ ವೇಳೆ ಇವರಲ್ಲೊಬ್ಬರು ಕಲ್ಲೆಸೆದ ಪರಿಣಾಮ ಪರಿಸ್ಥಿತಿ ಬಿಗಡಾಯಿಸಿದೆ. ಮೂವರಲ್ಲಿ ಒಬ್ಬರು ಗನ್ ತೆರೆದು ಫೈರಿಂಗ್ ಮಾಡಲು ಬಂದಾಗ ಆಲಿಶಾ ಇದಕ್ಕೆ ಅಡ್ಡ ಬಂದಿದ್ದಾಳೆ, ಆ ವೇಳೆ ಆಲಿಶಾಗೆ ಗುಂಡೇಟು ಬಿದ್ದಿದೆ.
ಫೈರಿಂಗ್ ಸಂಬಂಧ ಆಲಿಶಾ ಹಾಗೂ ಆಕೆಯ ಸ್ನೇಹಿತರ ಪಾತ್ರವನ್ನು ಅರಿತ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ.