ಮಂಡ್ಯ: ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಲಿತ ಮುಖಂಡ ಮರಳಿಗ ಶಿವರಾಜ್ ಬಂಧಿತ ವ್ಯಕ್ತಿ. ಜಾಲತಾಣದಲ್ಲಿ ಪರಮೇಶ್ವರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ಮದ್ದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೇ 30ರಂದು ಅಂಬೇಡ್ಕರ್ ಆಶಯಗಳನ್ನು ಪರಮೇಶ್ವರ್ ಉಳಿಸುವುದಿಲ್ಲ. ಆರ್.ಎಸ್.ಎಸ್.ನವರ ಜೊತೆ ನಂಟು ಹೊಂದಿದ್ದಾರೆ. ಇವರ ಬಗ್ಗೆ ತಾಕತ್ತಿದ್ದವರು ಉತ್ತರಿಸಲಿ ಎಂದು ಮರಳಿಗ ಶಿವರಾಜ್ ಪೋಸ್ಟ್ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.