ಸಿರಿವಂತ ಮಕ್ಕಳ ಪಾಲನೆ ಮಾಡಿ ದಿನಕ್ಕೆ 1.6 ಲಕ್ಷ ರೂ. ಸಂಪಾದನೆ ಮಾಡುತ್ತಾರೆ ಈ ನಟಿ…!

ದೊಡ್ಡ ಶ್ರೀಮಂತರ ಮನೆಗಳಲ್ಲಿ ಕೆಲಸಕ್ಕೆ ಸೇರುವುದೂ ಸಹ ಭಾರೀ ವೇತನ ತರುವ ಕೆಲಸ. ಮುಖೇಶ್ ಅಂಬಾನಿಯ ಚಾಲಕನಿಗೆ ತಿಂಗಳಿಗೆ ಎರಡು ಲಕ್ಷ ರೂ ವೇತನ ಬರುತ್ತದೆ. ಸಲ್ಮಾನ್ ಖಾನ್ ಬಾಡಿಗಾರ್ಡ್‌ಗೆ ವರ್ಷಕ್ಕೆ 15 ಲಕ್ಷ ರೂ. ಸಂಬಳ ಇದೆ.

ಅಮೆರಿಕದ ಗ್ಲೋರಿಯಾ ರಿಚರ್ಡ್ಸ್ ಎಂಬ ನಟಿ ಶತಕೋಟ್ಯಾಧೀಶರ ಮಕ್ಕಳನ್ನು ನೋಡಿಕೊಳ್ಳುತ್ತಾ ಪ್ರತಿನಿತ್ಯ 1.6 ಲಕ್ಷ ರೂ. ಸಂಪಾದಿಸುತ್ತಿದ್ದಾರೆ. ಮಕ್ಕಳ ಪಾಲನೆಯನ್ನು ಸಹವೃತ್ತಿಯಾಗಿ ಮಾಡುತ್ತಿರುವ ರಿಚರ್ಡ್ಸ್‌ಗೆ ಈ ಕಾಯಕದಿಂದಲೇ ಆಕೆಯ ವಾರ್ಷಿಕ ದುಡಿಮೆ ಯ 90 ಪ್ರತಿಶತ ಸಂಪಾದನೆಯಾಗುತ್ತಿದೆ.

ಖಾಸಗಿ ಜೆಟ್‌ಗಳಲ್ಲಿ ಓಡಾಡುವ ಈಕೆ, ಸಿರಿವಂತರ ಮಕ್ಕಳೊಂದಿಗೆ ವಿದೇಶಗಳಿಗೂ ಪ್ರಯಾಣ ಮಾಡುತ್ತಾರೆ. ದಿನವೊಂದಕ್ಕೆ 15 ಗಂಟೆಗಳ ಕಾಲ ಕೆಲಸ ಮಾಡುವ ಈಕೆ ಬಹಳಷ್ಟು ಮಂದಿ ತಿಂಗಳಲ್ಲಿ ಸಂಪಾದಿಸುವುದನ್ನು ಒಂದು ದಿನದಲ್ಲಿ ಗಳಿಸುತ್ತಾರೆ.

ತಮ್ಮ ಕೆಲಸದ ಭಾಗವಾಗಿ ಲಕ್ಸೂರಿ ಕಾರುಗಳಾದ ಟೆಸ್ಲಾ ಹಾಗೂ ಪೋರ್ಶ ಕಾರುಗಳನ್ನೂ ಸಹ ರಿಚರ್ಡ್ಸ್ ಚಾಲನೆ ಮಾಡಿದ್ದಾರೆ.

ಇಷ್ಟೆಲ್ಲಾ ಆದರೂ ಸಹ ಒಮ್ಮೊಮ್ಮೆ ತಮಗೆ ಕೊಡಬೇಕಾದ ಬಾಕಿ ಕೊಡಲು ಸಿರಿವಂತರು ಬಹಳ ಸತಾಯಿಸುತ್ತಾರೆ ಎನ್ನುತ್ತಾರೆ ರಿಚರ್ಡ್ಸ್.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read