
ಎಂಬಿಎ ಪದವೀಧರ ಪ್ರಫುಲ್ ಬಿಲ್ಲೋರ್ ಅವರು ತೆರೆದಿರುವ ಎಂಬಿಎ ಚಾಯ್ ವಾಲಾ ಯಶಸ್ಸಿನ ಬಗ್ಗೆ ನೀವು ಕೇಳಿರಬಹುದು ಮತ್ತು ಈಗ ಭಾರತದಾದ್ಯಂತ ಮಳಿಗೆಗಳನ್ನು ಇದು ಹೊಂದಿದೆ. ಬಿಹಾರದ ವರ್ತಿಕಾ ಸಿಂಗ್ ಅವರು ತಮ್ಮ ಕಾಲೇಜಿನ ಬಳಿ ಟೀ ಸ್ಟಾಲ್ ಅನ್ನು ಪ್ರಾರಂಭಿಸಿದ್ದು ಸುದ್ದಿಯಾಗಿತ್ತು. ಹರಿಯಾಣದ ಫರಿದಾಬಾದ್‌ನಲ್ಲಿ ಅವರು ‘ಬಿಟೆಕ್ ಚಾಯ್ವಾಲಿ ಎಂದು ಸ್ಥಾಪಿಸಿ ಸುದ್ದಿಯಾಗಿದ್ದರು.
ಇದೀಗ ಮುಂಬೈನ ಇಬ್ಬರು ಯುವಕರು ಐಷಾರಾಮಿ ಕಾರಿನ ಹಿಂಬದಿಯಿಂದ ಟೀ ಮಾರುತ್ತಿರುವ ಮತ್ತೊಂದು ವಿಡಿಯೋ ವೈರಲ್ ಆಗಿದೆ. ‘ಆಡಿ ಚಾಯ್ವಾಲಾ’ ಎಂದು ಕರೆಯಲ್ಪಡುವ ಇದನ್ನು ಮನ್ನು ಶರ್ಮಾ ಮತ್ತು ಅಮಿತ್ ಕಶ್ಯಪ್ ಪ್ರಾರಂಭಿಸಿದ್ದಾರೆ. ಅವರು ಆಡಿ ಕಾರಿನ ಹಿಂಭಾಗದಲ್ಲಿ ಲೋಖಂಡವಾಲಾದಲ್ಲಿ ರಸ್ತೆ ಬದಿಯಲ್ಲಿ ಚಹಾ ಮಾರುತ್ತಿದ್ದಾರೆ. ತಮ್ಮ ಸ್ಟಾಲ್ ಗೆ ‘ಓಡಿ ಟೀ’ ಎಂದು ಹೆಸರಿಟ್ಟಿದ್ದಾರೆ.
“ಯಾವುದೇ ವ್ಯವಹಾರವು ಸಣ್ಣ ವ್ಯಾಪಾರವಲ್ಲ, ಕಠಿಣ ಪರಿಶ್ರಮವನ್ನು ಗೌರವಿಸಿ ಸಹೋದರ” ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಅನೇಕ ನೆಟಿಜನ್‌ಗಳು ಇದು ಕಾರ್ಯಸಾಧ್ಯವಾದ ವ್ಯವಹಾರವಲ್ಲ ಎಂದು ಪೋಸ್ಟ್ ಮಾಡಿದ್ದಾರೆ. ಬೇರೆಯವರ ಎದುರು ಕೈಚಾಚದೇ ಶ್ರದ್ಧೆಯಿಂದ ಟೀ ಮಾರಿ ಕಷ್ಟಪಟ್ಟು ದುಡಿದವರೇ ಇಂದು ಪ್ರಧಾನಿಯಾಗಿರುವಾಗ ಯಾವ ಕೆಲಸವೂ ಸಣ್ಣದಲ್ಲ ಎನ್ನುವುದಕ್ಕೆ ಸಾಕ್ಷಿ ನಮ್ಮ ಕಣ್ಣೆದುರೇ ಇದೆ ಎಂದಿರುವ ಹಲವರು ಯುವಕರ ಸಾಧನೆಗೆ ಭೇಷ್ ಎನ್ನುತ್ತಿದ್ದಾರೆ.