34 ಕ್ಯಾಬಿನೆಟ್ ಸಚಿವರ ಪೈಕಿ ಅತ್ಯಂತ ಶ್ರೀಮಂತ ಸಚಿವರಾದ ಡಿಕೆಶಿ ಆಸ್ತಿ ಎಷ್ಟು ಗೊತ್ತಾ…..?

ಕರ್ನಾಟಕದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಕಾಂಗ್ರೆಸ್ ಸರ್ಕಾರದ ಎಲ್ಲಾ ಕ್ಯಾಬಿನೆಟ್ ಸಚಿವರ ಪೈಕಿ ಅತ್ಯಂತ ಶ್ರೀಮಂತರಾಗಿದ್ದಾರೆ. ಕರ್ನಾಟಕ ಎಲೆಕ್ಷನ್ ವಾಚ್ ಮತ್ತು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿಯ ಪ್ರಕಾರ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುವ ಶಿವಕುಮಾರ್ ಅವರು 1,413.80 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. 34 ಸಚಿವರ ಪೈಕಿ 32 ಸಚಿವರು ತಮ್ಮ ಆಸ್ತಿಯ ಸ್ವಯಂ ಪ್ರಮಾಣ ಪತ್ರಗಳನ್ನು ಒದಗಿಸಿದ್ದಾರೆ.

ಚುನಾವಣಾ ಆಯೋಗದ ವೆಬ್‌ಸೈಟ್‌ನ ಪ್ರಕಾರ ಸಚಿವರಾದ ಕೆ.ಜೆ. ಜಾರ್ಜ್ ಮತ್ತು ಎನ್‌ಎಸ್ ಬೋಸರಾಜು ಅವರ ಆಸ್ತಿ ವಿವರ ಲಭ್ಯವಿಲ್ಲ.

ಕರ್ನಾಟಕ ಸಂಪುಟದಲ್ಲಿ ಒಟ್ಟು 31 (97%) ಸಚಿವರು ಕೋಟ್ಯಾಧಿಪತಿಗಳಾಗಿದ್ದು, ಅವರ ಸರಾಸರಿ ಆಸ್ತಿ 119.06 ಕೋಟಿ. 34 ಸಚಿವರ ಪೈಕಿ ಮುಧೋಳ (ಎಸ್‌ಸಿ) ಕ್ಷೇತ್ರದ ತಿಮ್ಮಾಪುರ ರಾಮಪ್ಪ ಬಾಳಪ್ಪ ಅವರ ಆಸ್ತಿಮೌಲ್ಯ 58.56 ಲಕ್ಷ ರೂ. ಇದ್ದು ಅತಿ ಕಡಿಮೆ ಆಸ್ತಿ ಹೊಂದಿರುವ ಸಚಿವರಾಗಿದ್ದಾರೆ.

ಕನಿಷ್ಠ 24 ಕ್ಯಾಬಿನೆಟ್ ಸಚಿವರು ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ, ಅದರಲ್ಲಿ ಏಳು ಮಂದಿ ವಿರುದ್ಧ ಗಂಭೀರ ಆರೋಪಗಳಿವೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read