ಟ್ರಕ್ ನಲ್ಲಿ ಪಯಣಿಸಿದ ಸಂಪೂರ್ಣ ವಿಡಿಯೋ ಹಂಚಿಕೊಂಡ ರಾಹುಲ್ ಗಾಂಧಿ

ಇತ್ತೀಚಿಗೆ ದೆಹಲಿ-ಚಂಡೀಗಢ ಹೆದ್ದಾರಿಯಲ್ಲಿ ಟ್ರಕ್ ನಲ್ಲಿ ಪ್ರಯಾಣಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ಪ್ರಯಾಣದ ವಿಡಿಯೋವನ್ನ ಹಂಚಿಕೊಂಡಿದ್ದಾರೆ.

ರಾತ್ರಿ ವೇಳೆ ಟ್ರಕ್ ಡ್ರೈವರ್‌ಗಳೊಂದಿಗೆ ನಡೆಸಿದ ಸಂಭಾಷಣೆ ಹಾಗು ಜರ್ನಿಯ ವಿಡಿಯೋವನ್ನ ರಿಲೀಸ್ ಮಾಡಿದ್ದಾರೆ.

ಟ್ರಕ್ ಚಾಲಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಲು ರಾಹುಲ್ ಗಾಂಧಿ ಕಳೆದ ವಾರ ದೆಹಲಿಯಿಂದ ಚಂಡೀಗಢಕ್ಕೆ ಪ್ರಯಾಣ ಬೆಳೆಸಿದ್ದರು.

ಟ್ರಕ್‌ನೊಳಗೆ ಕುಳಿತು ಚಾಲಕನೊಂದಿಗೆ ಪ್ರಯಾಣಿಸುತ್ತಿರುವುದನ್ನು ಮತ್ತು ಡಾಬಾದಲ್ಲಿ ಚಾಲಕರೊಂದಿಗೆ ಮಾತನಾಡುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

“ಆರು ಗಂಟೆಗಳ ದೆಹಲಿ-ಚಂಡೀಗಢ ಪ್ರಯಾಣದಲ್ಲಿ ಟ್ರಕ್ ಡ್ರೈವರ್‌ಗಳೊಂದಿಗೆ ಆಸಕ್ತಿದಾಯಕ ಸಂಭಾಷಣೆ!ಎಂದು ವಿಡಿಯೋವನ್ನ ಟ್ವೀಟ್ ಮಾಡಿದ್ದಾರೆ. ಸಂಪೂರ್ಣ ವೀಡಿಯೊದ ಲಿಂಕ್ ಅನ್ನು ತಮ್ಮ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ.

ಭಾರತ್ ಜೋಡೋ ಯಾತ್ರೆ ವೇಳೆ ಜನರೊಂದಿಗೆ ಬೆರೆಯುತ್ತಾ ಸಂಭಾಷಣೆ ನಡೆಸುತ್ತಿದ್ದ ರಾಹುಲ್ ಗಾಂಧಿ ಇತ್ತೀಚಿಗೆ ಆಗಾಗ್ಗೆ ಸಾರ್ವಜನಿಕರನ್ನು ಭೇಟಿ ಮಾಡಿ ಅವರ ಸಮಸ್ಯೆ ಆಲಿಸುತ್ತಿರುತ್ತಾರೆ.

https://twitter.com/RahulGandhi/status/1663151329240567808?ref_src=twsrc%5Etfw%7Ctwcamp%5Etweetembed%7Ctwterm%5E1663151329240567808%7Ctwgr%5E7b493e70800358bcb4e49eaa4a2eb19db0445e92%7Ctwcon%5Es1_&ref_url=https%3A%2F%2Fthefederal.com%2Fnews%2Frahul-gandhi-shares-video-of-overnight-yatra-conversations-with-truck-drivers%2F

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read