ಬಹಳ ದಿನಗಳಿಂದ ಆಟೋಪ್ರಿಯರನ್ನು ಕಾತರದಿಂದ ಇರಿಸಿದ್ದ ಮಾರುತಿ ಸುಜ಼ುಕಿಯ ಜಿಮ್ನಿ ಕೊನೆಗೂ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಇದೇ ವೇಳೆ ಈ ಕಾರಿನ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರಿಂಗ್ ಮಾಡೆಲ್‌ಗಳಲ್ಲಿ ಯಾವುದು ಸೂಕ್ತ ಎಂಬುದು ಸ್ವಲ್ಪ ಗೊಂದಲ ಉಂಟು ಮಾಡಬಹುದು.
ಜಿಮ್ನಿಯಲ್ಲಿ ಸ್ಟಾಂಡರ್ಡ್ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್‌ಮಿಶನ್ ಇದ್ದು, 4-ಸ್ಪೀಡ್ ಆಟೋಮ್ಯಾಟಿಕ್ ಟಾರ್ಕ್ ಕನ್ವರ್ಟರ್ ಆಯ್ಕೆ ಪಡೆಯಲು ನೀವು ಇನ್ನಷ್ಟು ಹೆಚ್ಚಿನ ಮೊತ್ತ ಪಾವತಿ ಮಾಡಬೇಕು.
5-ಸ್ಪೀಡ್ ಮ್ಯಾನುವಲ್ ಆಯ್ಕೆಯು ಮಾರುತಿ ಕಾರುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವುದಕ್ಕಿಂತ ಸ್ವಲ್ಪ ತೂಕವಾಗಿದೆ ಎನಿಸಬಹುದು. ಕ್ಲಚ್ ಸಹ ಕೊಂಚ ಹೆವಿ ಎನಿಸಿದರೂ ಅದರ ಬಳಕೆ ಸರಾಗವಾಗಿಯೇ ಆಗುತ್ತದೆ. ನಗರಗಳಲ್ಲಿ ಓಡಾಡುವಾಗಿ ಆರಾಮವಾಗಿದ್ದರೂ ಸಹ ದೂರದ ಪ್ರಯಾಣ ಆಯಸವೆನಿಸಬಹುದು. ಆಪ್ ರೋಡಿಂಗ್‌ಗೆ ಮ್ಯಾನುವಲ್ ಗೇರ್‌ಬಾಕ್ಸ್ ಅತ್ಯುತ್ತಮ ಕಂಟ್ರೋಲ್ ನೀಡುವ ಕಾರಣ ನೀವು ಸವಾರಿಯ ಮೋಜು ಅನುಭವಿಸಬಹುದು.
ಅಪರೂಪದ ಅಥವಾ ವೀಕೆಂಡ್ ಚಾಲನೆಗೂ ಸಹ ಮ್ಯಾನುವಲ್ ಆಯ್ಕೆ ಸಾಕಷ್ಟು ಸಮಾಧಾನಕರವಾಗಿದೆ. ಇದೇ ವೇಳೆ, ಆಟೋಮ್ಯಾಟಿಕ್ ಆಯ್ಕೆ ಸಹ ಅನೇಕ ಪ್ರಯೋಜನಗಳನ್ನು ಒಳಗೊಂಡಿದೆ. ಈ ಆಯ್ಕೆಯಲ್ಲಿ ಆಫ್ ರೋಡ್ ಹಾಗೂ ಆನ್ ರೋಡ್ ಸವಾರಿಗಳು ಆರಾಮದಾಯಕವೆನಿಸುತ್ತವೆ. ಅದರಲ್ಲೂ ಹೊಸಬರಿಗೆ ಆಟೋಮ್ಯಾಟಿಕ್ ಆಯ್ಕೆಯಿಂದಾಗಿ ಕ್ಲಚ್ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.
ಕಡಿಮೆ ವೇಗದಲ್ಲಿ ಆನ್‌ರೋಡ್ / ಆಫ್‌ರೋಡ್ ಸಾಹಸಗಳಿಗೆ ಆಟೋಮ್ಯಾಟಿಕ್ ಆಯ್ಕೆ ಹೇಳಿಮಾಡಿಸಿದಂತಿದೆ. ಪ್ಯಾಡಲ್ ಶಿಫ್ಟರ್‌ಗಳಿಲ್ಲದ ಕಾರಣ ನೀವು ’2’ ಅಥವಾ ’ಎಲ್’ಮೋಡ್‌ಗೆ ಲಾಕ್ ಮಾಡುವ ಮೂಲಕ ಅತ್ಯಂತ ಕನಿಷ್ಠ ಗೇರ್‌ಗೆ ಫಿಕ್ಸ್ ಆಗಬಹುದು.
ಇಂಧನ ಕ್ಷಮತೆ ವಿಚಾರಕ್ಕೆ ಬಂದರೆ, ಆಟೋಮ್ಯಾಟಿಕ್‌ಗಿಂತ ಮ್ಯಾನುವಲ್ ವಾಸಿ. ಜಾಗರೂಕವಾಗಿ ಚಾಲನೆ ಮಾಡುವುದರಿಂದ ಮ್ಯಾನುವಲ್ ಮೋಡ್‌ನಲ್ಲಿ ನೀವು ಎರಡಂಕಿಯ ಮೈಲೇಜ್ ಸಾಧಿಸಬಹುದು. ಆದರೆ ಆಫ್‌ರೋಡ್ ಹಾಗೂ ಕಠಿಣ ಪರಿಸ್ಥಿತಿಗಳಲ್ಲಿನ ಚಾಲನೆಯ ವೇಳೆ ಯಾವ ಮೋಡ್ ಆದರೂ ಇಂಧನ ಕ್ಷಮತೆ ಸಾಧಿಸುವುದಿಲ್ಲ.
ನೀವೇನಾದರೂ ಪ್ರತಿನಿತ್ಯ ಚಾಲನೆ ಮಾಡುವುದಾದರೆ ಆಟೋಮ್ಯಾಟಿಕ್ ಇದ್ದಿದ್ದರಲ್ಲಿ ಸೂಕ್ತವಾದ ಆಯ್ಕೆ ಎನ್ನಬಹುದು. ಇದೇ ವೇಳೆ ಇಂಧನ ಕ್ಷಮತೆಯೊಂದಿಗೆ ನಿಮ್ಮ ಚಾಲನೆ ಎಂಜಾಯ್ ಮಾಡುವುದಾದರೆ ಮ್ಯಾನುವಲ್ ಮೋಡ್ ಉತ್ತಮ ಆಯ್ಕೆಯಾಗಿದೆ.