ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಭಾರೀ ಬಿರುಗಾಳಿಗೆ ಮೊಬೈಲ್ ಟವರ್ ಕುಸಿದು ಬಿದ್ದಿದೆ. ಭಾರತದ ಉತ್ತರ ಭಾಗಗಳಲ್ಲಿ ಭಾರೀ ಬಿರುಗಾಳಿ ವಿವಿಧ ನಗರಗಳ ಮೂಲಸೌಕರ್ಯಗಳಿಗೆ ಭಾರೀ ಹಾನಿಯನ್ನುಂಟುಮಾಡಿದೆ.
ನಾಗೌರ್ ಜಿಲ್ಲೆಯಲ್ಲಿ ಚಂಡಮಾರುತದ ಎಚ್ಚರಿಕೆಯನ್ನು ಹವಾಮಾನ ಇಲಾಖೆ ಈಗಾಗಲೇ ರವಾನಿಸಿದೆ. ಚಂಡಮಾರುತದ ನಂತರ ಭಾರೀ ಮಳೆಯಾಗಿದ್ದು ರಿಯಾಸಿ ಪ್ರದೇಶದಲ್ಲಿ ಟವರ್ ಬಿದ್ದ ಘಟನೆ ನಡೆದಿದೆ.
ಈ ಘಟನೆಯ ವಿಡಿಯೋವನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.