alex Certify ಆತ್ಮಹತ್ಯೆಯ ಕೂಪವಾಗ್ತಿದೆಯಾ ಈ ಶಿಕ್ಷಣ ಸಂಸ್ಥೆ ? ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆತ್ಮಹತ್ಯೆಯ ಕೂಪವಾಗ್ತಿದೆಯಾ ಈ ಶಿಕ್ಷಣ ಸಂಸ್ಥೆ ? ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳ ಸಾವು

ರಾಜಸ್ತಾನದ ಕೋಟಾದ ಅಲೆನ್ ಇನ್‌ಸ್ಟಿಟ್ಯೂಟ್‌ನಲ್ಲಿ ಕೇವಲ ಒಂದು ತಿಂಗಳಲ್ಲಿ ಐವರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರೋ ಆತಂಕಕಾರಿ ವಿಷಯ ಹೊರಬಿದ್ದಿದೆ. ಆದರೆ ಪ್ರಕರಣದಲ್ಲಿ ಪೊಲೀಸರು ವಿದ್ಯಾರ್ಥಿಗಳ ಆತ್ಮಹತ್ಯೆ ಪತ್ರಗಳನ್ನು ಬಚ್ಚಿಟ್ಟಿದ್ದಾರೆ ಎಂದು ಮೃತರ ಸಂಬಂಧಿಕರು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳು ನಿಜಕ್ಕೂ ಸ್ವಯಂ ನಿರ್ಣಯದಿಂದ ಇಂತಹ ಕಠಿಣ ನಿರ್ಧಾರ ತೆಗೆದುಕೊಂಡರೋ ಅಥವಾ ಅಧ್ಯಯನಕ್ಕೆ ಸಂಬಂಧಿಸಿದಂತೆ ಅವರು ಸಂಸ್ಥೆಯಿಂದ ಒತ್ತಡವನ್ನು ಎದುರಿಸಿದ್ದಾರೆಯೇ ಎಂದು ಸಂಬಂಧಿಕರು ತಿಳಿದುಕೊಳ್ಳಲು ಬಯಸಿದ್ದು ತನಿಖಾಧಿಕಾರಿಗಳ ಮೇಲೆ ಆರೋಪಿಸಿದ್ದಾರೆ.

ಮೇ 9 ರಿಂದ ಮೇ 27 ರ ವರೆಗೆ ಶೈಕ್ಷಣಿಕ ಸಂಸ್ಥೆಯಲ್ಲಿ ಐದು ಆತ್ಮಹತ್ಯೆಗಳು ನಡೆದಿವೆ. ಪದೇ ಪದೇ ಆತ್ಮಹತ್ಯೆ ಪ್ರಕರಣಗಳು ಜರುಗುತ್ತಿದ್ದರೂ ಸಂಸ್ಥೆಯ ಆಡಳಿತ ಮಂಡಳಿ ಏಕೆ ಕಾಳಜಿ ವಹಿಸುತ್ತಿಲ್ಲ ಎಂದು ಪೋಷಕರು ಪ್ರಶ್ನಿಸಿದ್ದಾರೆ. ಆಡಳಿತ ಮಂಡಳಿಯು ಸಕಾಲದಲ್ಲಿ ಕ್ರಮ ಕೈಗೊಂಡು ಸಂಸ್ಥೆಯಲ್ಲಿ ಏನು ಕೊರತೆ ಇದೆ ಎಂಬುದನ್ನು ಪರಿಶೀಲಿಸಿದ್ದರೆ ವಿದ್ಯಾರ್ಥಿಗಳು ಆತ್ಮಹತ್ಯೆಯ ಯೋಚನೆ ಕೂಡ ಮಾಡುತ್ತಿರಲಿಲ್ಲ ಎಂದು ವಾದಿಸಿದ್ದಾರೆ.

5 ಆತ್ಮಹತ್ಯೆ ಪ್ರಕರಣಗಳೆಂದು ಹೇಳಲಾಗಿದೆ, ಆದರೆ ನಿಜಕ್ಕೂ ಇನ್ನೂ ಹೆಚ್ಚಿನ ಆತ್ಮಹತ್ಯೆಗಳು ನಡೆದಿರಬಹುದು. ಶಿಕ್ಷಣ ಸಂಸ್ಥೆಯು ನಿಖರ ಸಂಖ್ಯೆಯನ್ನು ಬಚ್ಚಿಟ್ಟಿರಬಹುದೆಂದು ಪಾಲಕರು ಆಕ್ರೋಶ ಹೊರಹಾಕಿದ್ದಾರೆ. ವಿದ್ಯಾರ್ಥಿಗಳ ಕೊಠಡಿಯಿಂದ ವಶಪಡಿಸಿಕೊಂಡಿರುವ ಆತ್ಮಹತ್ಯೆ ಪತ್ರಗಳನ್ನು ಪೊಲೀಸರು ಬಚ್ಚಿಡುತ್ತಿದ್ದಾರೆ ಎಂದು ಆರೋಪಿಸಿದರು.

ಇತ್ತೀಚಿನ ಆತ್ಮಹತ್ಯೆ ಪ್ರಕರಣದಲ್ಲಿ ರಾಜಸ್ಥಾನದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಎರಡು ದಿನಗಳ ಹಿಂದೆ ಬಿಹಾರದ ವಿದ್ಯಾರ್ಥಿ ಕೂಡ ತನ್ನ ಹಾಸ್ಟೆಲ್ ಕೋಣೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...