ಅರ್ಜೆಂಟೀನಾದ ಅಧ್ಯಕ್ಷರನ್ನು ಕರೆದೊಯ್ಯುವ ವಿಮಾನ ಲ್ಯಾಂಡಿಂಗ್ ವೇಳೆ ಆಘಾತ ಸೃಷ್ಟಿಸಿದ ಕ್ಷಣ ಎದುರಾಯಿತು.
ವಿಮಾನ ಬೋಯಿಂಗ್ 757-200 ಲ್ಯಾಂಡಿಂಗ್ ವೇಳೆ ಸಂಭವಿಸುತ್ತಿದ್ದ ದೊಡ್ಡ ದುರಂತ ತಪ್ಪಿದೆ. ವಿಮಾನ ಲ್ಯಾಂಡಿಂಗ್ ವೇಳೆ ಎಡಕ್ಕೆ ತಿರುಗುವ ಮೊದಲು ರನ್ವೇಯಲ್ಲಿ ಅತ್ಯಂತ ಕೆಳಕ್ಕೆ ಹಾರಿತು. ಇದರಿಂದ ಕೆಲ ಕ್ಷಣಗಳವರೆಗೆ ಆತಂಕ ಸೃಷ್ಟಿಯಾದರೂ ಅಂತಿಮವಾಗಿ ಯಶಸ್ವಿಯಾಗಿ ರನ್ವೇಯಲ್ಲಿ ಇಳಿಯಿತು ಎಂದು ವರದಿಗಳು ತಿಳಿಸಿವೆ.
ಅರ್ಜೆಂಟೀನಾದ ಅಧ್ಯಕ್ಷ ಆಲ್ಬರ್ಟೊ ಫೆರ್ನಾಂಡಿಸ್ ಅವರನ್ನು ಕರೆದೊಯ್ಯಲು ಉದ್ದೇಶಿಸಲಾಗಿದ್ದ ಬೋಯಿಂಗ್ 757-200 ಅನ್ನು ಕೊನೆಗೆ ಪೈಲಟ್ ಯಶಸ್ವಿಯಾಗಿ ಲ್ಯಾಂಡಿಗ್ ಮಾಡಿದ್ದಾರೆ.
ಈ ಘಟನೆಯನ್ನು ಸುತ್ತಮುತ್ತಲಿನ ವೀಕ್ಷಕರು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ವಿಮಾನವು ಮಿಯಾಮಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಬ್ಯೂನಸ್ ಐರಿಸ್ನ ಜಾರ್ಜ್ ನ್ಯೂಬೆರಿ ಏರ್ಫೀಲ್ಡ್ ನಲ್ಲಿ ಇಳಿಯಿತು. ವಿವಿಧ ಕೋನಗಳಿಂದ ಸೆರೆಹಿಡಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
https://twitter.com/Eren50855570/status/1662002100501348352?ref_src=twsrc%5Etfw%7Ctwcamp%5Etweetembed%7Ctwterm%5E1662002100501348352%7Ctwgr%5E888daa6b03279ac017faf690de04ed99aee5f9c6%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-argentinas-new-presidential-plane-raises-eyebrows-with-risky-landing-maneuver
https://twitter.com/rinzelli62/status/1661842162927935490?ref_src=twsrc%5Etfw%7Ctwcamp%5Etweetembed%7Ctwterm%5E1661842162927935490%7Ctwgr%5E888daa6b03279ac017faf690de04ed99aee5f9c6%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fwatch-argentinas-new-presidential-plane-raises-eyebrows-with-risky-landing-maneuver