ರೊಮಾನಿಯಾದಲ್ಲಿ ನಿರ್ಮಿಸಲಾದ ಬೃಹತ್ ಟೀ-ಶರ್ಟ್ ಒಂದು ರಗ್ಬಿ ಅಂಗಳದಷ್ಟು ದೊಡ್ಡದಿದ್ದು, ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಿದೆ. ಈ ಟೀ-ಶರ್ಟ್ ನಿರ್ಮಿಸಲು ಐದು ಲಕ್ಷದಷ್ಟು ಪ್ಲಾಸ್ಟಿಕ್ ಬಾಟಲಿಗಳ ಮರುಬಳಕೆ ಮಾಡಲಾಗಿದೆ.
ಅಸೋಸಿಯೇಷಿಯಾ 11 ಈವನ್ ರಚಿಸಿರುವ ಅತಿ ದೊಡ್ಡ ಟೀ-ಶರ್ಟ್ 108.96ಮೀ (357.48 ಅಡಿ) ಉದ್ದ ಮತ್ತು 73.48 ಮೀ (241.08 ಅಡಿ) ಅಗಲವಿದೆ. ದಾಖಲೆಯ ಪ್ರಯತ್ನದ ಬಳಿಕ ಈ ಟೀ-ಶರ್ಟ್ಅನ್ನು 10,000ಕ್ಕೂ ಹೆಚ್ಚು ಸಣ್ಣ ಟೀ-ಶರ್ಟ್ಗಳನ್ನಾಗಿ ಪರಿವರ್ತಿಸಿ ಬಡಮಕ್ಕಳಿಗೆ ಹಂಚಲಾಗಿದೆ,” ಎಂದು ಗಿನ್ನೆಸ್ ವಿಶ್ವದಾಖಲೆಯ ಟ್ವಿಟರ್ ಹ್ಯಾಂಡಲ್ ತಿಳಿಸಿದೆ.
ರೊಮಾನಿಯಾದ ರಾಷ್ಟ್ರಧ್ವಜದ ಮಾಡೆಲ್ ಅನ್ನೇ ಟೀ-ಶರ್ಟ್ಗೆ ಅಳವಡಿಸಿದ್ದು, ರೊಮಾನಿಯನ್ ರಗ್ಬಿ ತಂಡದ ಜೆರ್ಸಿಯ ಮೇಲಿರುವ ತ್ರಿವರ್ಣವನ್ನೂ ಸೇರಿಸಲಾಗಿದೆ.