ಆಟೋಮೊಬೈಲ್ ದಿಗ್ಗಜ ಬಿಎಂಡಬ್ಲ್ಯೂ ಭಾರತದ ಮಾರುಕಟ್ಟೆಗೆ Z4 ರೋಡ್ಸ್ಟರ್ ಬಿಡುಗಡೆ ಮಾಡಿದ್ದು, ಬೆಲೆಯನ್ನು 89.30 ಲಕ್ಷ (ಎಕ್ಸ್-ಶೋರೂಂ) ಎಂದು ನಿಗದಿ ಪಡಿಸಿದೆ.
ಸಂಪೂರ್ಣವಾಗಿ ನಿರ್ಮಾಣಗೊಂಡ (ಸಿಬಿಯು) ಮಾಡೆಲ್ನಲ್ಲಿ ಭಾರತದ ಮಾರುಕಟ್ಟೆಗೆ ಆಗಮಿಸಲಿರುವ Z4 ರೋಡ್ಸ್ಟರ್ ಜೂನ್ನಿಂದ ಡೀಲರ್ಗಳ ಬಳಿ ದೊರಕಲಿದೆ. ಈ ವಾಹನವು BMW M ಪರ್ಫಾಮೆನ್ಸ್ ಹಾಗೂ BMW Z4 M40i ಮಾಡೆಲ್ಗಳಲ್ಲಿ ಲಭ್ಯವಿದೆ.
ಕಪ್ಪು, ಕೆಂಪು ಹಾಗೂ ನೀಲಿಯ ಅನೇಕ ಶೇಡ್ಗಳಲ್ಲಿ ಲಭ್ಯವಿರುವ ಈ ವಾಹನಕ್ಕೆ ಸಾಫ್ಟ್ ಟಾಪ್ ಇದ್ದು, ಹತ್ತು ಸೆಕೆಂಡ್ಗಳ ಒಳಗೆ ಎಲೆಕ್ಟ್ರಿಕಲ್ ಆಗಿ ತೆರೆದುಕೊಳ್ಳುತ್ತದೆ ಹಾಗೂ ಮುಚ್ಚಿಕೊಳ್ಳುತ್ತದೆ. ಮುಂಬದಿ ಚಕ್ರದ ಬಳಿ ದೊಡ್ಡ ಬ್ರೀದರ್ಗಳು ಹಾಗೂ ಏರೋಡೈನಾಮಿಕ್ ವೆಂಟ್ಗಳು ಸಹ ಈ ಕಾರಿಗೆ ಇವೆ.
ಒಳಾಂಗಣಕ್ಕೆ ಬಂದರೆ: ಟೋ-ಜ಼ೋನ್ ಏರ್ ಕಂಡೀಷನಿಂಗ್, ಸಕ್ರಿಯ ಪಾರ್ಕಿಂಗ್ ಅಂತರ ನಿಯಂತ್ರಣ (ಪಿಡಿಸಿ), 10.25 ಇಂಚಿನ ಡಿಜಿಟಲ್ ಕ್ಲಸ್ಟರ್, ಬಿಎಂಡಬ್ಲ್ಯೂ ಲೈವ್ ಕಾಕ್ಪಿಟ್, ಹರ್ಮಾನ್ ಸರೌಂಡ್ ಸೌಂಡ್ ವ್ಯವಸ್ಥೆಯೊಂದಿಗೆ 12 ಲೌಡ್ ಸ್ಪೀಕರ್ಗಳು, ಬಿಎಂಡಬ್ಲ್ಯೂ ಹೆಡ್ಅಪ್ ಡಿಸ್ಪ್ಲೇ, ವೈರ್ಲೆಸ್ ಚಾರ್ಜಿಂಗ್ ವ್ಯವಸ್ಥೆ, ಚಾಲಕ ಹಾಗೂ ಪ್ರಯಾಣಿಕರಿಗೆ ಮುಂಬದಿ ಹಾಗೂ ಅಕ್ಕಪಕ್ಕದಲ್ಲಿ ಏರ್ ಬ್ಯಾಗ್ಗಳ ವ್ಯವಸ್ಥೆಗಳಿವೆ.
3 ಲೀಟರ್, ಆರು ಸಿಲಿಂಡರ್ ಇನ್-ಲೈನ್ ಪೆಟ್ರೋಲ್ ಇಂಜಿನ್ ಮೂಲಕ 340ಎಚ್ಪಿಯಷ್ಟು ಗರಿಷ್ಠ ಬಲ ಹಾಗೂ 500ಎನ್ಎಂನಷ್ಟು ಗರಿಷ್ಠ ಟಾರ್ಕ್ ಅನ್ನು BMW Z4 ರೋಡ್ಸ್ಟರ್ಗಳು ಉತ್ಪಾದಿಸಬಲ್ಲವು. 8-ಸ್ಪೀಡ್ ಆಟೋಮ್ಯಾಟಿಕ್ ಸ್ಟೆಪ್ಟ್ರಾನಿಕ್ ಸ್ಪೋರ್ಟ್ ಟ್ರಾನ್ಸ್ಮಿಶನ್ನೊಂದಿಗೆ ಈ ಕಾರು ಶೂನ್ಯದಿಂದ 100ಕಿಮೀ/ಗಂಟೆ ವೇಗವನ್ನು 4.5 ಸೆಕೆಂಡ್ಗಳಲ್ಲಿ ತಲುಪಬಲ್ಲದಾಗಿದೆ.