ರೆಡ್ ಕಾರ್ಪೆಟ್ ಸ್ವಾಗತದಿಂದ ಪುಳಕಿತರಾದ ಸನ್ನಿ ಲಿಯೋನ್

ಕ್ಯಾನೆಸ್ ಚಲನಚಿತ್ರೋತ್ಸವ 2023ರಲ್ಲಿ ಭಾರತೀಯ ಸಿನಿ ಕ್ಷೇತ್ರದ ಅನೇಕರಿಗೆ ರೆಡ್ ಕಾರ್ಪೆಟ್ ಸ್ವಾಗತ ಸಿಗುತ್ತಿದೆ. ’ಕೆನಡಿ’ ಚಿತ್ರ ತಂಡದೊಂದಿಗೆ ಅನುರಾಗ್ ಕಶ್ಯಪ್ ಸಹ ಕೆಂಪುಹಾಸಿನ ಮೇಲೆ ನಡೆದು ಈ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.

ಮಧ್ಯರಾತ್ರಿಯ ಸ್ಕ್ರೀನಿಂಗ್ ಕಂಡ ಈ ಚಿತ್ರದ ಪ್ರಮುಖ ತಾರಾಗಣದಲ್ಲಿರುವ ನಟ ರಾಹುಲ್ ಭಟ್ ಹಾಗೂ ನಟಿ ಸನ್ನಿ ಲಿಯೋನ್ ಸಹ ರೆಡ್ ಕಾರ್ಪೆಟ್‌ ಮೇಲೆ ಠೀವಿಯದಲ್ಲಿ ನಡೆದು ಬಂದಿದ್ದಾರೆ. ಕೆಂಪನೆ ಲಿಪ್‌ಸ್ಟಿಕ್‌ನಲ್ಲಿ, ಬನ್‌ನಂತೆ ಮಾಡಿದ್ದ ಕೇಶಶೈಲಿಯಲ್ಲಿ ಮಿಂಚುತ್ತಿದ್ದ ಸನ್ನಿ ಲಿಯೋನ್ , ಸಮಾರಂಭದಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ಕೈಬೀಸುತ್ತಾ ಸಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದೇ ಮೊದಲ ಬಾರಿಗೆ ತಮ್ಮ ಚಿತ್ರವೊಂದರ ಸ್ಕ್ರೀನಿಂಗ್‌‌ ಗಾಗಿ ಕ್ಯಾನೆಸ್‌ಗೆ ಸನ್ನಿ ಆಗಮಿಸಿದ್ದಾರೆ. ಈ ಕ್ಷಣಗಳ ಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ಸನ್ನಿ, “ಇದುವರೆಗಿನ ನನ್ನ ವೃತ್ತಿಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳು!,” ಎಂದು ಕ್ಯಾಪ್ಷನ್ ಕೊಟ್ಟು, ಕೆನಡಿ ಚಿತ್ರತಂಡಕ್ಕೆ ಧನ್ಯವಾದದೊಂದಿಗೆ ಶೇರ್‌ ಮಾಡಿಕೊಂಡಿದ್ದಾರೆ ಸನ್ನಿ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read