HomeInternationalViral Photo | ನಾಯಿಗಳು ನೀಡಿರೋ ಫೋಸ್ ಗೆ ಬೆರಗಾದ ನೆಟ್ಟಿಗರು

Viral Photo | ನಾಯಿಗಳು ನೀಡಿರೋ ಫೋಸ್ ಗೆ ಬೆರಗಾದ ನೆಟ್ಟಿಗರು

ಗುಂಪಿನಲ್ಲಿ ನಾಯಿಗಳನ್ನು ಕುಳ್ಳಿರಿಸಿ ಫೋಟೊಗೆ ಪೋಸ್ ನೀಡುವಂತೆ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಇದನ್ನು ಸಾಧಿಸಲಾಗಿದೆ.

ಹೌದು, ಜೋಶುವಾ ಜೆ. ಹರ್ಸ್‌ಮನ್ ಎಂಬಾತ ಶ್ವಾನಗಳ ಗುಂಪಿನ ಭಾವಚಿತ್ರವನ್ನು ಕ್ಲಿಕ್ಕಿಸಿದ್ದಾನೆ. ಇದೀಗ ವೈರಲ್ ಆಗಿರುವ ಈ ಪೋಸ್ಟ್ ಅನ್ನು ವೀ ರೇಟ್ ಡಾಗ್ಸ್ ಎಂಬ ಪುಟವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಪೋಸ್ಟ್‌ನಲ್ಲಿ 10 ನಾಯಿಮರಿಗಳ ಛಾಯಾಚಿತ್ರವಿದೆ. ಎಲ್ಲವೂ ಅವುಗಳ ಎತ್ತರಕ್ಕೆ ಅನುಗುಣವಾಗಿ ನಿಂತಿವೆ. ಚಿತ್ರವನ್ನು ಸ್ಯಾನ್ ಫ್ರಾನ್ಸಿಸ್ಕೋದ ಬೀದಿಗಳಲ್ಲಿ ಕ್ಲಿಕ್ಕಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ನಾಯಿಗL ಚಿತ್ರವನ್ನು ವಾಕಿಂಗ್ ಮಧ್ಯದಲ್ಲಿ ತೆಗೆದುಕೊಂಡಿದ್ದಾರೆ. ಜೋಶುವಾ ಫೋಟೋ ಕ್ಲಿಕ್ಕಿಸುತ್ತಿದ್ದರೆ ಎಲ್ಲಾ ಶ್ವಾನಗಳು ತದೇಕಚಿತ್ತದಿಂದ ಫೋಸ್ ನೀಡಿದೆ. ಈ ಫೋಟೋವನ್ನು ಸಹ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಭಾರಿ ವೈರಲ್ ಆಗಿದ್ದು, ನನ್ನ ಜೀವನದಲ್ಲಿ ನಾನು ನೋಡಿದ ಮೋಹಕವಾದ ವಿಷಯ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ನೀವು ಸ್ವರ್ಗದ ರಾಜ್ಯವನ್ನು ಪ್ರವೇಶಿಸಿದಾಗ ಇದು ನಿಮ್ಮನ್ನು ಸ್ವಾಗತಿಸುತ್ತದೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಈ ಮಧ್ಯೆ ಜೋಶುವಾ ಅವರ ಇನ್ಸ್ಟಾಗ್ರಾಂ ಖಾತೆಯು ನಾಯಿಗಳನ್ನು ಒಳಗೊಂಡಿರುವ ಒಂದೇ ರೀತಿಯ ಚಿತ್ರಗಳಿಂದ ಸಂಪೂರ್ಣವಾಗಿ ತುಂಬಿದೆ.

For Latest News Updates, Join Our Whatsapp Community🚩
RELATED ARTICLES

Most Popular