ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ ಚಿತ್ರ) ಜಗತ್ತನ್ನು ಹೇಗೆ ಆಕ್ರಮಿಸಿದೆ ಎಂಬುದು ಬಹುಷಃ ನಿಮಗೆ ತಿಳಿದಿರಬಹುದು. ಕಲಾವಿದರು ಸಹ ಎಐ ಅನ್ನು ಪ್ರೀತಿಸುತ್ತಾರೆ. ನೀವು ಹಿಂದೆಂದೂ ಊಹಿಸಿರದಂತಹ ಚಿತ್ರಗಳು ಇದರಲ್ಲಿ ಹೊರಹೊಮ್ಮುತ್ತದೆ. ಇತ್ತೀಚೆಗಷ್ಟೇ ಹಲವು ಮಹನೀಯರ ಎಐ ಚಿತ್ರಗಳು ಎಲ್ಲರನ್ನೂ ಮೂಕವಿಸ್ಮಿತಗೊಳಿಸಿತ್ತು. ಇದೀಗ ಬಾಲಿವುಡ್ ನಟರು, ಮಹಿಳೆಯರಾಗಿದ್ದರೆ ಹೇಗೆ ಕಾಣುತ್ತಿದ್ದರು ಎಂಬುದರ ಬಗೆಗೆನ ಎಐ ಚಿತ್ರಗಳು ಇದೀಗ ವೈರಲ್ ಆಗಿದೆ.
ಹೌದು, ಈ ಚಿತ್ರಗಳನ್ನು ಸಾಹಿದ್ ಎಂಬ ಕಲಾವಿದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್ ಅವರು ಅಮಿತಾ ಬಚ್ಚನ್ ಆಗಿ, ಶಾರುಖ್ ಖಾನ್ ಶಹಜಾದಿ ಖಾನ್ ಆಗಿ, ವರುಣ್ ಧವನ್, ರಾಜ್‌ಪಾಲ್ ಯಾದವ್, ಅಮೀರ್ ಖಾನ್, ಟೈಗರ್ ಶ್ರಾಫ್, ಸಲ್ಮಾನ್ ಖಾನ್, ಅಕ್ಷಯ್ ಕುಮಾರ್, ಪಂಕಜ್ ತ್ರಿಪಾಠಿ ಮತ್ತು ಶಾಹಿದ್ ಕಪೂರ್ ಮುಂತಾದ ತಾರೆಗಳು ನಟಿಯರಾಗಿ ಕಾಣಿಸಿಕೊಂಡಿದ್ದಾರೆ.
ಸದ್ಯ, ಈ ಪೋಸ್ಟ್ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಟನ್ ಗಳಷ್ಟು ಪ್ರತಿಕ್ರಿಯೆಗಳನ್ನು ಪಡೆದುಕೊಂಡಿದೆ. ಕೆಲವರು ಸಲ್ಮಾನ್ ಖಾನ್ ಅವರ ಮಹಿಳಾ ಆವೃತ್ತಿಯನ್ನು ಚಿತ್ರಾಂಗದಾ ಸಿಂಗ್ ಮತ್ತು ವರುಣ್ ಧವನ್ ಅವರನ್ನು ಸೋನಂ ಬಾಜ್ವಾಗೆ ಹೋಲಿಸಿದ್ದಾರೆ. ಎಲ್ಲರೂ ಕೂಡ ಮಹಿಳಾಮಣಿಯರಾಗಿ ಸುಂದರವಾಗಿ ಕಾಣುತ್ತಿದ್ದಾರೆ.