ಶೀಘ್ರವಾಗಿ ಚೇತರಿಸಿಕೊಳ್ಳುತ್ತಿರುವ ರಿಷಬ್ ಪಂಥ್; ಯಾವುದೇ ಸಹಾಯವಿಲ್ಲದೇ ಮುಕ್ತವಾಗಿ ನಡೆದಾಟ

ಭೀಕರ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಕ್ರಿಕೆಟಿಗ ರಿಷಬ್ ಪಂಥ್ ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಈಗ ಯಾರದ್ದೇ ಸಹಾಯವಿಲ್ಲದೇ ಅಥವಾ ಊರುಗೋಲಿನ ನೆರವಿಲ್ಲದೇ ಮುಕ್ತವಾಗಿ ನಡೆಯಲು ಸಮರ್ಥರಾಗಿದ್ದಾರೆ.

ಆರಾಮಾಗಿ ರಿಷಬ್ ಪಂಥ್ ಓಡಾಡುತ್ತಿರುವ ದೃಶ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಸೆರೆಹಿಡಿದಿರುವ ಫೋಟೋಗಳಲ್ಲಿ ರಿಷಬ್ ಪಂಥ್ ಸ್ವತಂತ್ರವಾಗಿ ಆರಾಮವಾಗಿ ನಡೆದಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಪಂಥ್, ಅಭಿಮಾನಿಗಳ ಸೆಲ್ಫಿಗೆ ಪೋಸ್ ನೀಡಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ದೆಹಲಿ ಹಾಗೂ ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ರಿಷಬ್ ಪಂಥ್ ಭೀಕರ ರಸ್ತೆ ಅಪಘಾತಕ್ಕೀಡಾಗಿದ್ದರು. ಆ ಬಳಿಕ ಅವರು ಅನಿರ್ದಿಷ್ಟ ಅವಧಿಗೆ ಕ್ರಿಕೆಟ್‌ನಿಂದ ಹೊರಗುಳಿಯಬೇಕಾಯಿತು.

ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ರಿಷಬ್ ಪಂಥ್ ಅಪಘಾತದಿಂದಾಗಿ ಟೂರ್ನಿಯಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರಾಶದಾಯಕ ಪ್ರದರ್ಶನ ಕಂಡಿದೆ.

https://twitter.com/CricCrazyJohns/status/1661323110841466882?ref_src=twsrc%5Etfw%7Ctwcamp%5Etweetembed%7Ctwterm%5E1661323110841466882%7Ctwgr%5Ed92d4ed840c6f9b323183d600062783682c5c704%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fcricketcountry-epaper-dh062ee17f72d542b28faf77b89c2a0a75%2Frishabhpantrecoveringfastwalksfreelyobligesfanswithselfieswatchviralvideo-newsid-n502899184

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read