ದಿನವೂ ರೈಲಿನಲ್ಲಿ ಸಂಚರಿಸುವ ನಾಯಿ; ಮುದ್ದಾದ ವಿಡಿಯೋ ನೋಡಿ ನೆಟ್ಟಿಗರು ಫಿದಾ

ಮುಂಬೈನಲ್ಲಿ ಸ್ಥಳೀಯ ರೈಲುಗಳದ್ದೇ ಕಾರುಬಾರು. ಈ ರೈಲುಗಳು ನಗರದ ಜೀವನಾಡಿಯಾಗಿದ್ದು, ಅದು ಇಲ್ಲದೆಯೇ ಮುಂಬೈಯನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ.

ಆದರೆ ನಾಯಿಯು ತನ್ನ ಪ್ರಯಾಣಕ್ಕಾಗಿ ರೈಲುಗಳನ್ನು ಬಳಸುವುದನ್ನು ನೀವು ಎಂದಾದರೂ ಊಹಿಸಿದ್ದೀರಾ? ಇಂಥದ್ದೇ ಒಂದು ವಿಡಿಯೋ ಈಗ ವೈರಲ್‌ ಆಗಿದೆ. ನಾಯಿಯೊಂದು ದಿನವೂ ಲೋಕಲ್ ಟ್ರೈನ್ ಬಳಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆದಿದೆ.

ಈ ವಿಡಿಯೋವನ್ನು ಇಂಡಿಯಾ ಕಲ್ಚರಲ್ ಹಬ್ ಪೇಜ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದೆ. ವೀಡಿಯೊದಲ್ಲಿ, ರೈಲಿನಲ್ಲಿ ನಿತ್ಯ ಪ್ರಯಾಣಿಸುವ ಬೀದಿನಾಯಿಯೊಂದು ಅದರೊಳಗೆ ಪ್ರವೇಶಿಸುವುದನ್ನು ಕಾಣಬಹುದು. ಬೊರಿವಲಿಯಿಂದ ಅಂಧೇರಿ ನಿಲ್ದಾಣದವರೆಗೆ ನಾಯಿ ಪ್ರಯಾಣಿಸುತ್ತಿದೆ ಎಂದು ಹೇಳಲಾಗಿದೆ.

ನಾಯಿಯು ಯಾರಿಗೂ ತೊಂದರೆಯಾಗದಂತೆ ಶಾಂತಿಯುತವಾಗಿ ನೆಲದ ಮೇಲೆ ಕುಳಿತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮುದ್ದಾದ ಕ್ಷಣವು ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯವನ್ನು ಗೆದ್ದಿದೆ. ಈ ವೀಡಿಯೋ ಒಂದು ಲಕ್ಷ ಲೈಕ್ಸ್ ಮತ್ತು 8.3 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read