ಜಪಾನ್ ಮತ್ತು ಪಪುವಾ ನ್ಯೂಗಿನಿಯಾ ಪ್ರವಾಸ ಮುಗಿಸಿ ಆಸ್ಟ್ರೇಲಿಯಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾರತೀಯ ಸಮುದಾಯದಿಂದ ಅದ್ದೂರಿ ಸ್ವಾಗತ ದೊರೆತಿದೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸಮುದಾಯ ಕಾರ್ಯಕ್ರಮದ ಮುನ್ನ, “ವೆಲ್ ಕಮ್ ಮೋದಿ” ಎಂದು ಪ್ರಧಾನಿ ನರೇಂದ್ರ ಮೋದಿಗೆ ಆಗಸದಲ್ಲಿ ಅಕ್ಷರಗಳನ್ನು ಮೂಡಿಸುವ ಮೂಲಕ ವಿಭಿನ್ನವಾಗಿ, ವಿಶೇಷವಾಗಿ ಸ್ವಾಗತಿಸಲಾಗಿದೆ.
ಏರ್ ಕ್ರಾಫ್ಟ್ ಬಳಸಿ ವೆಲ್ ಕಮ್ ಮೋದಿ ಎಂದು ಆಕಾಶದಲ್ಲಿ ಬರೆದಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ.