alex Certify 50 ವರ್ಷಗಳ ಅವಧಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ 1.38 ಲಕ್ಷ ಮಂದಿ ಬಲಿ: ವರದಿಯಲ್ಲಿ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

50 ವರ್ಷಗಳ ಅವಧಿಯಲ್ಲಿ ಪ್ರಾಕೃತಿಕ ವಿಕೋಪಕ್ಕೆ 1.38 ಲಕ್ಷ ಮಂದಿ ಬಲಿ: ವರದಿಯಲ್ಲಿ ಬಹಿರಂಗ

ಹವಾಮಾನ ವೈಪರೀತ್ಯ, ಹವಾಮಾನ ಮತ್ತು ಜಲ-ಸಂಬಂಧಿತ ಘಟನೆಗಳು ಆಘಾತಕಾರಿ ವಿಷಯವೊಂದನ್ನು ಹೊರಗೆಡವಿದೆ. ಇದರ ವರದಿಯ ಪ್ರಕಾರ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ 1,38,377 ಮಂದಿ ಮೃತಪಟ್ಟಿರುವುದಾಗಿ ಹೇಳಲಾಗಿದೆ.

1970 ರಿಂದ 2021 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು 573 ಪ್ರಕೃತಿ ವಿಕೋಪಗಳು ಉಂಟಾಗಿದ್ದು, 1,38,377 ಮಂದಿ ಪ್ರಾಣ ಕಳೆದುಕೊಂಡಿರುವುದಾಗಿ ಹೇಳಲಾಗಿದೆ. ಇದನ್ನು ವಿಶ್ವಸಂಸ್ಥೆಯ ವಿಶೇಷ ಸಂಸ್ಥೆಯಾದ ವಿಶ್ವ ಹವಾಮಾನ ಇಲಾಖೆಯ ಅಧ್ಯಯನ ತಿಳಿಸಿದೆ.

ಜಾಗತಿಕವಾಗಿ, ಈ ಅವಧಿಯಲ್ಲಿ 11,778 ಘಟನೆಗಳು ವರದಿಯಾಗಿದ್ದು, 20 ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. $4.3 ಟ್ರಿಲಿಯನ್ ಆರ್ಥಿಕ ನಷ್ಟಕ್ಕೆ ಕಾರಣವಾಗಿವೆ. ವಿಶ್ವಾದ್ಯಂತ ವರದಿಯಾದ ಸಾವುಗಳಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸಂಭವಿಸಿದೆ.

ಭಾರತದಲ್ಲಿ, 1970 ಮತ್ತು 2021 ರ ನಡುವೆ 573 ವಿಪತ್ತುಗಳು 1,38,377 ಜನರನ್ನು ಬಲಿತೆಗೆದುಕೊಂಡಿವೆ ಎಂದು ಈ ವರದಿ ಹೇಳಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...