ದೇಶದಲ್ಲಿ ಭಾರೀ ವಿವಾದಕ್ಕೀಡಾಗಿರುವ ʼದಿ ಕೇರಳ ಸ್ಟೋರಿʼ ಚಿತ್ರವು ಬರ್ಮಿಂಗ್ ಹ್ಯಾಮ್ ನಲ್ಲಿ ಪ್ರದರ್ಶನಗೊಳ್ಳುತ್ತಿರುವಾಗ ಪ್ರತಿಭಟನೆಯ ಬಿಸಿ ತಟ್ಟಿದೆ. ಮುಸ್ಲಿಂ ಕಾರ್ಯಕರ್ತರು ವಿವಾದಾತ್ಮಕ ಬಾಲಿವುಡ್ ಚಲನಚಿತ್ರ ‘ದಿ ಕೇರಳ ಸ್ಟೋರಿ’ ಪ್ರದರ್ಶನದ ವೇಳೆ ನುಗ್ಗಿ ಗಲಾಟೆ ಮಾಡಿರೋ ವರದಿಯಾಗಿದೆ.
ಕಾಶ್ಮೀರಿ ಕಾರ್ಯಕರ್ತ ಶಕೀಲ್ ಅಫ್ಸರ್ ನೇತೃತ್ವದ ಪ್ರತಿಭಟನಾಕಾರರ ಗುಂಪು ಶುಕ್ರವಾರ ಬರ್ಮಿಂಗ್‌ಹ್ಯಾಮ್‌ನ ಸಿನಿವರ್ಲ್ಡ್ ಥಿಯೇಟರ್‌ನಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನಕ್ಕೆ ಅಡ್ಡಿಪಡಿಸಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬ್ರಿಟಿಷ್ ಮುಸ್ಲಿಂ ಸುದ್ದಿ ವೆಬ್‌ಸೈಟ್ ‘5 ಪಿಲ್ಲರ್ಸ್’ ನಲ್ಲಿ ಅಪ್‌ಲೋಡ್ ಮಾಡಲಾದ 10 ನಿಮಿಷಗಳ ಕ್ಲಿಪ್‌ನಲ್ಲಿ 35 ವರ್ಷದ ಅಫ್ಸರ್ ಸೇರಿದಂತೆ ಅವರ ಗುಂಪು ಚಿತ್ರಮಂದಿರಕ್ಕೆ ಪ್ರವೇಶಿಸಿ ಚಲನಚಿತ್ರ ಪ್ರದರ್ಶನ ನಿಲ್ಲಿಸುವಂತೆ ಕೂಗಿದೆ.
ಚಿತ್ರಪ್ರದರ್ಶನ ನಿಲ್ಲಿಸುವಂತೆ ಸಿನಿವರ್ಲ್ಡ್ ನ ಸಿಬ್ಬಂದಿಗಳಿಗೆ ಒತ್ತಾಯಿಸಲಾಯಿತಾದರೂ ಪ್ರೇಕ್ಷಕರು ಕಾರ್ಯಕರ್ತರನ್ನು ಎದುರಿಸಿ ಅವರನ್ನು ಭದ್ರತಾ ಸಿಬ್ಬಂದಿ ಸಹಾಯದಿಂದ ಹೊರಗೆ ಕಳಿಸಿದ್ದಾರೆ.