ತಾವು ಸೈಕಲ್ ಮಾರಾಟ ಮಾಡಿದ ದಾಖಲೆಗಳನ್ನು ಸರಿಯಾಗಿ ನಿರ್ವಹಿಸದ ಹಿನ್ನೆಲೆಯಲ್ಲಿ ಗುಜರಾತಿನ ವಡೋದರ ಪೊಲೀಸರು, ಐದು ಅಂಗಡಿ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ವಡೋದರದ ನವಪುರ ಠಾಣೆಯ ಪೊಲೀಸರು, ಜಿಲ್ಲೆಯಲ್ಲಿರುವ ಎಲ್ಲ ಸೈಕಲ್ ಮಾರಾಟ ಮಳಿಗೆಗಳಿಗೆ ತಪಾಸಣೆಗೆ ತೆರಳಿದ್ದು ಈ ವೇಳೆ ಐದು ಅಂಗಡಿ ಮಾಲೀಕರುಗಳು ಸೈಕಲ್ ಖರೀದಿಸಿದವನ ವಿಳಾಸ, ಸೈಕಲ್ ಫ್ರೇಮ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆಗಳನ್ನು ನಿರ್ವಹಿಸದೆ ಇರುವುದು ಕಂಡು ಬಂದಿದೆ.
ಈ ಹಿಂದೆ ಬಾಂಬ್ ಸ್ಫೋಟಕ್ಕಾಗಿ ಸೈಕಲ್ ಗಳನ್ನು ಬಳಕೆ ಮಾಡಿದ್ದ ಹಿನ್ನೆಲೆಯಲ್ಲಿ ಸೈಕಲ್ ಮಾರಾಟದ ವೇಳೆ ಅದನ್ನು ಖರೀದಿಸುವವರಿಂದ ಸಂಪೂರ್ಣ ವಿವರ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಆದರೆ ಈ ಅಂಗಡಿ ಮಾಲೀಕರುಗಳು ಅಂತಹ ಯಾವುದೇ ಕಾರ್ಯ ಮಾಡಿರಲಿಲ್ಲ. ಹೀಗಾಗಿ ಅವರುಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಜಾಮೀನು ದೊರೆತಿದೆ.