ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2023 -24ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.
ಶಾಲಾ ಕರ್ತವ್ಯದ ದಿನಗಳು, ರಜೆ ದಿನಗಳು, ವಾರ್ಷಿಕ ಕಾರ್ಯಸೂಚಿ, ಪ್ರತಿ ತಿಂಗಳು ಬೋಧಿಸಬೇಕಾದ ಅಧ್ಯಯನಗಳು, ವಿವಿಧ ಕ್ಲಬ್ ಗಳ ರಚನೆ, ಪುಸ್ತಕ ಪರಿಚಯ ಅವಧಿ ನಿರ್ವಹಣೆ, ತರಗತಿವಾರು, ವಿಷಯವಾರು ವಾರ್ಷಿಕ ಯೋಜನೆಗಳ ತಯಾರಿಕೆಗೆ ಮಾರ್ಗಸೂಚಿಯಲ್ಲಿ ಸೂಚನೆ ನೀಡಲಾಗಿದೆ.
ಶೈಕ್ಷಣಿಕ ವರ್ಷದ ಪೂರ್ವ ತಯಾರಿ, ದಾಖಲಾತಿ ಆಂದೋಲನ, ಮುಖ್ಯ ಶಿಕ್ಷಕರ ಡೈರಿ ನಿರ್ವಹಣೆಗೆ ಸೂಚನೆ ನೀಡಲಾಗಿದ್ದು, ಶಾಲೆ ಆರಂಭಕ್ಕೆ ಶಾಲೆಯನ್ನು ಸಿದ್ಧವಾಗಿಟ್ಟುಕೊಳ್ಳಲು ಮುಖ್ಯ ಶಿಕ್ಷಕರಿಗೆ ತಿಳಿಸಲಾಗಿದೆ. ಮಾರ್ಗಸೂಚಿ ಸಂಪೂರ್ಣ ಕೈಪಿಡಿಯನ್ನು http://www.school education.kar.nic.in/ ವೆಬ್ಸೈಟ್ ನಲ್ಲಿ ಗಮನಿಸಬಹುದಾಗಿದೆ.