ಶುಕ್ರವಾರದಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ್ದು, ಇವುಗಳ ಬದಲಾವಣೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ನಿಗದಿತ ಅವಧಿಯವರೆಗೆ ಇವುಗಳು ಚಲಾವಣೆಯಲ್ಲಿಯೂ ಇರಲಿವೆ ಎಂದು ತಿಳಿಸಲಾಗಿದೆ.
ಇದರ ಮಧ್ಯೆ ನೋಟು ರದ್ದತಿ ಕುರಿತಂತೆ ಮಾತನಾಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನಿ ಮೋದಿಯವರು ಜಪಾನ್ ಗೆ ತೆರಳಿದಾಗಲೆಲ್ಲ ನೋಟು ರದ್ದು ತೀರ್ಮಾನ ಮಾಡುತ್ತಾರೆ. ಈ ಹಿಂದೆ ಜಪಾನ್ ಗೆ ತೆರಳುವಾಗ 500 ಹಾಗೂ 1000 ಮುಖಬೆಲೆಯ ನೋಟು ರದ್ದು ಮಾಡಿದ್ದರು ಎಂದು ಹೇಳಿದ್ದಾರೆ.
ಇದೀಗ ಮತ್ತೆ ಜಪಾನ್ ಗೆ ತೆರಳುವಾಗ 2000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು, ಇದರಿಂದ ದೇಶಕ್ಕೆ ಲಾಭವಾಗಿದ್ಯೋ ನಷ್ಟವಾಗಿದ್ಯೋ ಎಂಬುದರ ಕುರಿತು ಅವರು ಯಾವುದೇ ಸ್ಪಷ್ಟನೆ ನೀಡುವುದಿಲ್ಲ. ಮೋದಿಯವರು ಮಾಡುವ ಇಂತಹ ಕಾರ್ಯಗಳಿಂದ ದೇಶದ ಜನತೆಗೆ ತೊಂದರೆಯಾಗುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.