ನಾಳೆಯಿಂದ 2000 ರೂ. ನೋಟು ಬದಲಾವಣೆಗೆ ಅವಕಾಶ ಕಲ್ಪಿಸಿದ್ದು, ಬದಲಾವಣೆಗೆ ಇಚ್ಛಿಸುವವರು ಬ್ಯಾಂಕಿಗೆ ಹೋಗಬೇಕಿದೆ.
ಆರ್‌ಬಿಐ ನೋಟು ಬದಲಾವಣೆ ಮಾಡಿಕೊಳ್ಳಲು ರಿಕ್ವೆಸ್ಟ್ ಫಾರ್ಮ್ ಬಿಡುಗಡೆ ಮಾಡಿದೆ. ಅದನ್ನು ಭರ್ತಿ ಮಾಡಿ ಬ್ಯಾಂಕಿಗೆ ಸಲ್ಲಿಸುವ ಮೂಲಕ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ನೋಟು ವಿನಿಮಯ ಮಾಡಿಕೊಳ್ಳುವವರಿಗೆ ಮಾತ್ರ ಇದು ಅನ್ವಯಿಸುತ್ತದೆ. ಗ್ರಾಹಕರು ತಮ್ಮ ಖಾತೆ ಇರುವ ಬ್ಯಾಂಕುಗಳಲ್ಲಿ ಹಣ ಜಮಾ ಮಾಡಲು ಇದು ಅನ್ವಯವಾಗುವುದಿಲ್ಲ. ಅವರು ಎಂದಿನಂತೆ ತಮ್ಮ ಬ್ಯಾಂಕಿನ ಚಲನ್ ಗಳಲ್ಲಿ 2000 ರೂ. ನೋಟಿನ ವಿವರ ನೀಡಿ ಜಮಾ ಮಾಡಿಕೊಳ್ಳಬಹುದಾಗಿದೆ.
ನೋಟು ವಿನಿಮಯ ಮಾಡಿಕೊಳ್ಳಲು ಹೋಗುವವರು ರಿಕ್ವೆಸ್ಟ್ ಫಾರ್ಮ್, ಐಡಿ ಕಾರ್ಡ್ ತೋರಿಸಿ ಒಂದು ದಿನಕ್ಕೆ ಗರಿಷ್ಠ 20 ಸಾವಿರ ರೂಪಾಯಿ ವಿನಿಮಯ ಮಾಡಿಕೊಳ್ಳಬಹುದು. ಡಿಎಲ್, ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್, ನರೇಗಾ ಜಾಬ್ ಕಾರ್ಡ್ ಮೊದಲಾದವುಗಳನ್ನು ದಾಖಲೆಯಾಗಿ ನೀಡಬೇಕಿದೆ ಎಂದು ಹೇಳಲಾಗಿದೆ.