ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಸಿದ್ದರಾಮಯ್ಯ ಪ್ರಸ್ತುತ ಇರುವ ನಿರಂತರ ರಾಜಕೀಯ ಚಟುವಟಿಕೆಯ ನಡುವೆಯೂ ತಮ್ಮಿಷ್ಟದ ಕ್ರಿಕೆಟ್ ಪಂದ್ಯ ವೀಕ್ಷಣೆ ಮಾಡಿದ್ದಾರೆ.
ಸಚಿವ ಸಂಪುಟ ರಚನೆಯ ಕಸರತ್ತಿನ ನಡುವೆಯೂ ಅವರು ಕಳೆದ ಗುರುವಾರ ರಾತ್ರಿ ಬೆಂಗಳೂರಿನ ಕುಮಾರ ಕೃಪಾ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಹೆಚ್) ನಡುವಿನ ನಿರ್ಣಾಯಕ ಪಂದ್ಯದ ಅಂತಿಮ ಓವರ್ಗಳನ್ನು ವೀಕ್ಷಿಸಿದರು.
ಟೂರ್ನಮೆಂಟ್ನಲ್ಲಿ RCB ತಂಡ ಜೀವಂತವಾಗಿರಲು ನಿರ್ಣಾಯಕವಾಗಿದ್ದ ಪಂದ್ಯವನ್ನ ಸಿದ್ದರಾಮಯ್ಯ ವೀಕ್ಷಿಸುತ್ತಿರುವ ಫೋಟೋಗಳು ವೈರಲ್ ಆಗಿವೆ.
RCBಯ ವಿರಾಟ್ ಕೊಹ್ಲಿ ಮತ್ತು ನಾಯಕ ಫಾಫ್ ಡು ಪ್ಲೆಸಿಸ್ ತಂಡವನ್ನು ಎಂಟು ವಿಕೆಟ್ಗಳ ಗೆಲುವಿನತ್ತ ಕೊಂಡೊಯ್ದರು. ಈ ಮೂಲಕ ನಾಕೌಟ್ ಸುತ್ತಿಗೆ ಅರ್ಹತೆ ಪಡೆಯುವ ಭರವಸೆಯನ್ನು ಜೀವಂತವಾಗಿರಿಸಿದರು.
ಮೇ 20 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12:30 ಕ್ಕೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಮತ್ತು ಇತರ ಕೆಲವು ನಾಯಕರು ಕ್ರಮವಾಗಿ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.