ಸಾಮಾಜಿಕ ಜಾಲತಾಣ ಸೆನ್ಸೇಷನ್ ಕಿಲಿ ಪಾಲ್ ಅಪಾರ ಭಾರತೀಯ ಅಭಿಮಾನಿಗಳನ್ನು ಹೊಂದಿದ್ದಾರೆ. ಹಲವು ಉಲ್ಲಾಸದ ವಿಡಿಯೋಗಳೊಂದಿಗೆ ತನ್ನ ಅಭಿಮಾನಿಗಳು ಮತ್ತು ಅನುಯಾಯಿಗಳನ್ನು ಮನರಂಜಿಸುತ್ತಾರೆ. ಬಾಲಿವುಡ್ ಹಾಡುಗಳಿಗೆ ಲಿಪ್ ಸಿಂಕ್ ಮಾಡುವ ಮೂಲಕ ತಾಂಜೇನಿಯಾದ ಪ್ರತಿಭೆ ಜನಪ್ರಿಯತೆಯನ್ನು ಪಡೆದ್ರು. ಅಷ್ಟೇ ಅಲ್ಲ ಬಳಿಕ ಭಾರತೀಯ ಸಿನಿಮಾ ಹಾಡುಗಳಿಗೆ ನೃತ್ಯ ಮಾಡಲು ಕೂಡ ಶುರು ಮಾಡಿದ್ರು.
ನೆಟ್ಟಿಗರು ಕಿಲಿ ಪೌಲ್ ಪ್ರತಿಭೆಯನ್ನು ಇಷ್ಟಪಟ್ಟಿದ್ದಾರೆ. ಇದೀಗ, ಅವರು ತಮ್ಮ ಸಹೋದರಿ ಜೊತೆಗೆ ಹಿಂದಿಯ ಜೋಶ್ ಚಿತ್ರದ ಹಾಡಿಗೆ ಸ್ಟೆಪ್ಸ್ ಹಾಕುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೈ ಮೇರಾ ದಿಲ್ ಹಾಡನ್ನು ಐಶ್ವರ್ಯಾ ರೈ ಮತ್ತು ಚಂದ್ರಚೂರ್ ಸಿಂಗ್ ಮೇಲೆ ಚಿತ್ರಿಸಲಾಗಿದೆ. ಕಳೆದ ವಾರ ಹಂಚಿಕೊಳ್ಳಲಾದ ವೀಡಿಯೊ 9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ವೀಡಿಯೊದಲ್ಲಿ, ಕಿಲಿ ಕುರ್ತಾ ಮತ್ತು ಪೈಜಾಮ ಧರಿಸಿದ್ದರೆ, ಅವರ ಸಹೋದರಿ ನೀಮಾ ಲಿಲಾಕ್ ಲೆಹೆಂಗಾ ಚೋಲಿಯನ್ನು ಧರಿಸಿದ್ದರು. ವಿಡಿಯೋ ಕಿಲಿ ಪಾಲ್ ಹಾಡಿಗೆ ಲಿಪ್ ಸಿಂಕ್ ಮಾಡುವುದರೊಂದಿಗೆ ಪ್ರಾರಂಭವಾಗುತ್ತದೆ. ನಂತರ ಆತನ ಸಹೋದರಿ ನೃತ್ಯ ಮೂಲಕ ಪ್ರವೇಶಿಸುತ್ತಾರೆ. ಭಾರತೀಯರು ಇದನ್ನು ಬಹಳವಾಗಿ ಕೊಂಡಾಡಿದ್ದಾರೆ. ನೀವು ಆಫ್ರಿಕಾವನ್ನು ಬಿಟ್ಟು ಭಾರತಕ್ಕೆ ಬರಬೇಕು ಎಂದು ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
https://www.youtube.com/watch?v=mc4WMqGaJmo&feature=youtu.be