ಛಾಯಾಗ್ರಾಹಕರೊಬ್ಬರು ಫೋಟೋ ಕ್ಲಿಕ್ಕಿಸುವ ಸಲುವಾಗಿ ಫೋಸ್ ನೀಡುವಂತೆ ವೃದ್ಧ ಸಿಖ್ ವ್ಯಕ್ತಿಯನ್ನು ಕೇಳಿಕೊಂಡಿದ್ದಾರೆ. ಇದಕ್ಕೆ ವೃದ್ಧ ವ್ಯಕ್ತಿ ನೀಡಿದ ಅಮೂಲ್ಯ ಪ್ರತಿಕ್ರಿಯೆ ಆನ್ಲೈನ್ನಲ್ಲಿ ವೈರಲ್ ಆಗಿದೆ.
ಇದೀಗ ವೈರಲ್ ಆಗಿರುವ ವಿಡಿಯೋವನ್ನು ಸುತೇಜ್ ಸಿಂಗ್ ಪನ್ನು ಅವರು ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ. ನಿಮ್ಮ ಚಿತ್ರಗಳನ್ನು ಕ್ಲಿಕ್ ಮಾಡಬಹುದೇ ಎಂದು ವೃದ್ಧ ಸಿಖ್ ವ್ಯಕ್ತಿಯನ್ನು ಫೋಟೋಗ್ರಾಫರ್ ಕೇಳಿದ್ದಾರೆ. ಆ ವ್ಯಕ್ತಿ ಸಂತೋಷದಿಂದ ತನ್ನ ಕುರ್ತಾವನ್ನು ಸರಿಪಡಿಸಿ, ಕ್ಯಾಮರಾಗೆ ಪೋಸ್ ನೀಡಿದ್ರು. ಅಲ್ಲದೆ ತಮ್ಮ ಫೋಟೋ ಕಾಪಿ ನೀಡುವಂತೆ ವೃದ್ಧ ವ್ಯಕ್ತಿ ಕೇಳಿಕೊಂಡ್ರು. ಫೋಟೋಗ್ರಾಫರ್ ಸುತೇಜ್ ಪ್ರಿಂಟ್ ಔಟ್ ನೀಡಿದಾಗ ವೃದ್ಧ ವ್ಯಕ್ತಿ ಸಂತೋಷಪಟ್ಟುಕೊಂಡ್ರು. ಅಲ್ಲದೆ ತಮ್ಮ ಫೋಟೋ ಕಾಪಿ ಹಿಡಿದುಕೊಂಡು ಕ್ಯಾಮರಾಗೆ ಪೋಸ್ ನೀಡಿದ್ರು.
ಫೋಟೋ ಕಾಪಿ ನೀಡುವಂತೆ ಕೇಳಿಕೊಂಡಾಗ ವೃದ್ಧ ವ್ಯಕ್ತಿ ಹೇಳಿದ ಮಾತಿಗೆ ನೆಟ್ಟಿಗರ ಹೃದಯ ಕರಗಿದೆ, ನನ್ನ ಮಕ್ಕಳು ಈ ಫೋಟೋವನ್ನು ನೋಡಬೇಕೆಂದು ನಾನು ಬಯಸುತ್ತೇನೆ. ಇದರಿಂದ ಅವರು ಮುಂದಿನ ಪೀಳಿಗೆಗೆ ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಅವರು ಇದನ್ನು ಮೆಚ್ಚುತ್ತಾರೆ ಎಂದು ಅವರು ಹೇಳಿದರು.