ಟ್ರಕ್ ಚಾಲಕನೊಬ್ಬ ಜಾಕ್‌ಪಾಟ್ ಅನ್ನು ಹೊಡೆದಿದ್ದಾನೆ. ರಾಬಿನ್ ರೀಡೆಲ್ ಎಂಬ ವ್ಯಕ್ತಿಯು ಹಬಾರ್ಡ್ ಮೂಲದವನಾಗಿದ್ದು, ನಿಯಮಿತವಾಗಿ ಲಾಟರಿ ಆಡುತ್ತಿದ್ದ. ಸೋಮವಾರದಂದು ಓರೆಗಾನ್ ಲಾಟರಿಯ ವಿನ್ ಫಾರ್ ಲೈಫ್ ಆಟದಲ್ಲಿ ಅದೃಷ್ಟ ಅವನಿಗೆ ಒಲಿದು ಬಂತು. ತನ್ನ ಜೀವನದುದ್ದಕ್ಕೂ ಪ್ರತಿ ವಾರ ಡಾಲರ್ 1000 (ಅಂದಾಜು ರೂ. 82000) ಜಾಕ್‌ಪಾಟ್ ಬಹುಮಾನವನ್ನು ಗಳಿಸಿದ್ದಾನೆ.
ಓರೆಗಾನ್ ಲಾಟರಿಯ ಅಧಿಕೃತ ವೆಬ್‌ಸೈಟ್ ಪ್ರಕಾರ, ರಾಬಿನ್ 2001 ರಲ್ಲಿ ಪ್ರಾರಂಭವಾದಾಗಿನಿಂದ ವಿನ್ ಫಾರ್ ಲೈಫ್ ಆಟವನ್ನು ನಿಯಮಿತವಾಗಿ ಆಡಿದ್ದಾನೆ. ಲಾಟರಿ ಜಾಕ್ ಪಾಟ್ ಹೊಡೆಯುತ್ತಿದ್ದಂತೆ ರಾಬಿನ್ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ವರ್ಷಕ್ಕೆ ಡಾಲರ್ 52000 (ಅಂದಾಜು ರೂ 42.75 ಲಕ್ಷ) ಹಣವನ್ನು ರಾಬಿನ್ ಗೆದ್ದಿದ್ದಾನೆ.
ರಾಬಿನ್ ತನಗೆ ಬಂದ ಹಣವನ್ನು ಸದುಪಯೋಗಪಡಿಸಿಕೊಳ್ಳುವ ಯೋಜನೆಗಳನ್ನು ಹೊಂದಿದ್ದಾನೆ. ಜಾಕ್‌ಪಾಟ್ ಹಣವನ್ನು ತಮ್ಮ ಬಿಲ್‌ಗಳನ್ನು ಪಾವತಿಸಲು ಮತ್ತು ಸುಮಾರು ಮೂರು ವರ್ಷಗಳ ಹಿಂದೆ ತಮ್ಮ ಪತ್ನಿ ಡೆಬಿಯೊಂದಿಗೆ ಖರೀದಿಸಿದ ಮನೆಯನ್ನು ನವೀಕರಿಸಲು ಮುಂದಾಗಿದ್ದಾನೆ. ಅಷ್ಟೇ ಅಲ್ಲ, ವಿವಾಹ ವಾರ್ಷಿಕೋತ್ಸವದಂದು ಪ್ರಯಾಣಕ್ಕೂ ಯೋಜಿಸಿದ್ದಾನೆ. ಇದಲ್ಲದೆ, ರಾಬಿನ್ ಇನ್ನು ಎರಡ್ಮೂರು ವರ್ಷಗಳಲ್ಲಿ ನಿವೃತ್ತನಾಗಲು ಯೋಜಿಸುತ್ತಿರುವುದರಿಂದ ಜಾಕ್‌ಪಾಟ್ ಹಣವು ಆತನ ಆರ್ಥಿಕ ಬೆಂಬಲಕ್ಕೆ ಶಕ್ತಿಯಾಗಲು ಸಹಾಯಕವಾಗಿದೆ.
ಈ ಹಿಂದೆ, ಅಮೆರಿಕದ ಟ್ರಕ್ ಡ್ರೈವರ್‌ಗೆ ಲಾಟರಿ ಟಿಕೆಟ್‌ನಲ್ಲಿ $ 1 ಮಿಲಿಯನ್ (ಅಂದಾಜು ರೂ 7.5 ಕೋಟಿ) ಜಾಕ್‌ಪಾಟ್ ಹೊಡೆದಿದ್ದ.