ಸಾಮಾನ್ಯವಾಗಿ ತಿನಿಸುಗಳನ್ನು ಪ್ಯಾಕ್ ಮಾಡಲು ನಾವು ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸುತ್ತೇವೆ. ಚಪಾತಿ ಮತ್ತಿತರ ತಿನಿಸುಗಳು ಫಾಯಿಲ್ ಪೇಪರ್‌ನಲ್ಲಿ ಪ್ಯಾಕ್ ಮಾಡಿದ್ರೆ ಬಿಸಿಯಾಗಿ ಫ್ರೆಶ್ ಆಗಿರುತ್ತವೆ. ಮಕ್ಕಳ ಟಿಫಿನ್ ಬಾಕ್ಸ್ ಪ್ಯಾಕ್ ಮಾಡಲು ಕೂಡ ಅಲ್ಯೂಮಿನಿಯಂ ಫಾಯಿಲ್ ಅನ್ನು ಬಳಸಲಾಗುತ್ತದೆ. ಆದರೆ ಈ ಅಲ್ಯೂಮಿನಿಯಂ ಫಾಯಿಲ್ ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ. ಆರೋಗ್ಯಕ್ಕೆ ಇದು ತುಂಬಾ ಅಪಾಯಕಾರಿ.
ಆಮ್ಲೀಯ ವಸ್ತುಗಳನ್ನು ಪ್ಯಾಕಿಂಗ್ ಮಾಡಬೇಡಿ – ಆಮ್ಲೀಯ ವಸ್ತುಗಳನ್ನು ಫಾಯಿಲ್ ಪೇಪರ್‌ನಲ್ಲಿ ಪ್ಯಾಕ್ ಮಾಡಬಾರದು. ಇವುಗಳನ್ನು ಫಾಯಿಲ್‌ನಲ್ಲಿ ಸುತ್ತಿದರೆ ಬೇಗನೆ ಹಾಳಾಗುತ್ತದೆ. ಇದರೊಂದಿಗೆ ಅವುಗಳ ರಾಸಾಯನಿಕ ಸಮತೋಲನವೂ ಹದಗೆಡಬಹುದು. ಟೊಮೆಟೊ ಚಟ್ನಿ, ಸಿಟ್ರಿಕ್ ಹಣ್ಣುಗಳನ್ನು ಅಪ್ಪಿತಪ್ಪಿಯೂ ಫಾಯಿಲ್ ಪೇಪರ್‌ನಲ್ಲಿ ಸುತ್ತಬೇಡಿ.
ತುಂಬಾ ಬಿಸಿಯಾದ ಆಹಾರವನ್ನು ಪ್ಯಾಕ್ ಮಾಡಬೇಡಿ- ಅನೇಕ ಬಾರಿ ತುಂಬಾ ಬಿಸಿಯಾದ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್ನಲ್ಲಿ ಪ್ಯಾಕ್ ಮಾಡುತ್ತಾರೆ, ಇದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ತುಂಬಾ ಬಿಸಿಯಾದ ಆಹಾರವನ್ನು ಪ್ಯಾಕ್ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕವು ಆಹಾರದಲ್ಲಿ ಬೆರೆತುಹೋಗುತ್ತದೆ. ಅಲ್ಯೂಮಿನಿಯಂ ಫಾಯಿಲ್ನಲ್ಲಿ ಪ್ಯಾಕ್ ಮಾಡಿದ ತುಂಬಾ ಬಿಸಿಯಾದ ಆಹಾರವನ್ನು ನಿರಂತರವಾಗಿ ಸೇವಿಸುವುದರಿಂದ ಸಮಸ್ಯೆಯಾಗುತ್ತದೆ.
ಹಳಸಿದ ಆಹಾರ –ರಾತ್ರಿ ಉಳಿದ ಆಹಾರವನ್ನು ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಸುತ್ತಿ ಇಡಬೇಡಿ. ಇದು ಆರೋಗ್ಯಕ್ಕೆ ತುಂಬಾ ಹಾನಿಕಾರಕ.ಇದನ್ನು ತಿಂದರೆ ಆರೋಗ್ಯ ಕೆಡುತ್ತದೆ.
ರೋಗನಿರೋಧಕ ಶಕ್ತಿ ದುರ್ಬಲವಾಗಬಹುದು – ನಿರಂತರವಾಗಿ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಆಹಾರವನ್ನು ಪ್ಯಾಕ್ ಮಾಡಿದರೆ ಮತ್ತು ಗಂಟೆಗಳ ಬಳಿಕ ತಿಂದರೆ ರೋಗ ನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಪ್ರತಿದಿನ ಅಲ್ಯೂಮಿನಿಯಂ ಫಾಯಿಲ್‌ನಲ್ಲಿ ಇರಿಸಲಾದ ಆಹಾರವನ್ನು ಸೇವಿಸಿದರೆ ರೋಗಗಳ ವಿರುದ್ಧ ಹೋರಾಡುವ ದೇಹದ ಶಕ್ತಿಯನ್ನು ಕಡಿಮೆ ಮಾಡುತ್ತದೆ.