‘ಶ್ರೀಮಂತ’ನಾಗಿ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ ಸೋನುಸೂದ್

ನಟ ಸೋನು ಸೂದ್ ಕನ್ನಡ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. 2019 ರಲ್ಲಿ ಪೌರಾಣಿಕ ಚಿತ್ರ ಕುರುಕ್ಷೇತ್ರದಲ್ಲಿ ಕೊನೆಯ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದ ಬಾಲಿವುಡ್ ನಟ ಸೋನು ಸೂದ್, ರೈತರ ಕುರಿತಾದ ʼಶ್ರೀಮಂತʼ ಎಂಬ ಚಲನಚಿತ್ರದೊಂದಿಗೆ ಮರಳಿದ್ದಾರೆ.

ರಮೇಶ್ ಹಾಸನ್ ನಿರ್ದೇಶನದ ಈ ಚಿತ್ರದಲ್ಲಿ ಸೋನು ಕೃಷಿಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂತ್ರಜ್ಞಾನವು ಕೃಷಿ ಕ್ಷೇತ್ರದ ಮೇಲೆ ಹೇಗೆ ಪ್ರಭಾವ ಬೀರಿದೆ ಎಂಬುದನ್ನು ಅನ್ವೇಷಿಸುವ ಕಥೆಯನ್ನು ಸಿನಿಮಾ ಹೊಂದಿದೆ. ಮೇ 19 ಶ್ರೀಮಂತ ಸಿನಿಮಾ ತೆರೆ ಮೇಲೆ ಬರಲಿದೆ.

ಸೋನು ಸೂದ್ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಮಾಡಿದ ಎಲ್ಲಾ ಮಾನವೀಯ ಚಟುವಟಿಕೆಗಳಿಗಾಗಿ ಇಡೀ ರಾಷ್ಟ್ರಕ್ಕೆ ನಟ ಸೋನು ಸೂದ್ ನಿಜ ಜೀವನದ ನಾಯಕ ಎಂದು ತಂಡ ಹೇಳುತ್ತದೆ. ಚಿತ್ರ ನಿರ್ಮಾಪಕರ ಪ್ರಕಾರ ಶ್ರೀಮಂತ ಸಿನಿಮಾ ಸಮಾಜಕ್ಕೆ ಒಂದು ಪ್ರಮುಖ ಸಂದೇಶವನ್ನು ಹೊಂದಿದೆ, ಅದನ್ನು ಸೋನು ಪಾತ್ರದ ಮೂಲಕ ಹೇಳಲಾಗುತ್ತದೆ. ಇಡೀ ಜಗತ್ತು ಇಂದು ಸೋನು ಸೂದ್ ರನ್ನು ಗುರುತಿಸುತ್ತದೆ, ಆದ್ದರಿಂದ ಇಂದು ಸಮಾಜದಲ್ಲಿ ಒಬ್ಬ ರೈತ ಎಷ್ಟು ಮುಖ್ಯ ಎಂಬ ಸಂದೇಶವನ್ನು ನೀಡುವುದು ಹೆಚ್ಚಿನ ವ್ಯಾಪ್ತಿಯನ್ನು ಮತ್ತು ಪ್ರಭಾವವನ್ನು ಬೀರುತ್ತದೆ ಎಂದಿದೆ.

ಚಿತ್ರದಲ್ಲಿ ಸೋನು ಜೊತೆಗೆ ವೈಷ್ಣವಿ ಚಂದ್ರನ್, ವೈಷ್ಣವಿ ಪಟ್ವರ್ಧನ್, ಕ್ರಾಂತಿ, ಕಲ್ಯಾಣಿ, ಚರಣ್‌ರಾಜ್, ರಮೇಶ್ ಭಟ್, ಸಾಧು ಕೋಕಿಲ, ರಾಜು ತಾಳಿಕೋಟೆ, ರವಿಶಂಕರ್ ಗೌಡ, ಗಿರಿ, ಮಧುಗಿರಿ ಪ್ರಕಾಶ್, ಕುರಿ ರಂಗ, ಬ್ಯಾಂಕ್ ಮಂಜಣ್ಣ, ಬಸವರಾಜು ಹಾಸನ ಸೇರಿದಂತೆ ಹಲವರು ನಟಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read