
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ, ತಮ್ಮ ಒಂದು ಕಾಲದ ಆಪ್ತ, ಕಾಂಗ್ರೆಸ್ ಅಭ್ಯರ್ಥಿ ಎಚ್.ಡಿ. ತಮ್ಮಯ್ಯ ಅವರಿಂದಲೇ ಪರಾಭವಗೊಂಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ತಮ್ಮಯ್ಯ 7,000ಕ್ಕೂ ಅಧಿಕ ಮತಗಳಿಂದ ಗೆಲುವಿನ ನಗೆ ಬೀರಿದ್ದಾರೆ.
ಈ ಸೋಲಿನ ಮಧ್ಯೆ ಸಿ.ಟಿ. ರವಿಯವರಿಗೆ ಮತ್ತೊಂದು ಶಾಕ್ ಎದುರಾಗಿದೆ. ಕಳೆದ 20 ವರ್ಷಗಳಿಂದಲೂ ಸಿ.ಟಿ. ರವಿ ಅವರ ಜೊತೆಗಿದ್ದ ಹಲವರು ತಮ್ಮಯ್ಯ ಗೆಲುವಿನ ಬಳಿಕ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇವರುಗಳು ತಮ್ಮಯ್ಯ ಅವರಿಗೂ ಆಪ್ತರಾಗಿದ್ದು ಈಗ ಅವರ ಬಣ ಸೇರುತ್ತಿದ್ದಾರೆ.
ಹೀಗಾಗಿ ಪಕ್ಷ ತೊರೆಯದಂತೆ ಇವರುಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸವನ್ನು ಸಿ.ಟಿ. ರವಿಯವರು ಮಾಡಬೇಕಿದ್ದು, ಇದರ ಜೊತೆಗೆ ತಮ್ಮ ಸೋಲಿನ ಹಿಂದಿನ ಕಾರಣಗಳನ್ನೂ ಸಹ ವಿಶ್ಲೇಷಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.