ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸೋಲಿನ ಬಗ್ಗೆ ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಿ.ಟಿ. ರವಿ ನನ್ನನ್ನು ಬಿಜೆಪಿಯಿಂದ ಹೊರಗೆ ಕಳಿಸಿದರು. ಆದರೆ, ಜನ ಕ್ಷೇತ್ರದಿಂದಲೇ ಅವರನ್ನು ಹೊರಗೆ ಕಳಿಸಿದ್ದಾರೆ ಎಂದು ಹೇಳಿದ್ದಾರೆ.
ಚಿಕ್ಕಮಗಳೂರು ಇನ್ನು ಮುಂದೆ ವೀರಶೈವ ಲಿಂಗಾಯಿತರ ಕ್ಷೇತ್ರವಾಗಲಿದೆ. ಸಿ.ಟಿ. ರವಿ ದತ್ತಮಾಲೆ, ಅಹಿತಕರ ಘಟನೆ ಮುಂದಿಟ್ಟು ಪ್ರಚಾರ ನಡೆಸುತ್ತಿದ್ದರು. ಇನ್ನು ಮುಂದೆ ಅವರ ವಿಚಾರಗಳು ಕೆಲಸ ಮಾಡುವುದಿಲ್ಲ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮೊಬೈಲ್ ಸ್ವಿಚ್ ಆಫ್ ಮಾಡಲಿಲ್ಲ. ಅವರು ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿದ್ದರೆ ಬಿಜೆಪಿಗೆ 50 ಸ್ಥಾನವಷ್ಟೇ ಬರುತ್ತಿತ್ತು ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯಲ್ಲಿ ಎಂ.ಪಿ. ಕುಮಾರಸ್ವಾಮಿ ಹೇಳಿದ್ದಾರೆ.
ಮೂಡಿಗೆರೆ ಕ್ಷೇತ್ರದಲ್ಲಿ ಬಿಜೆಪಿಗೆ ಜೀವ ತುಂಬಿದ್ದೆ ನಾನು. ನನ್ನನ್ನು ಸಿ.ಟಿ. ರವಿ ಬಿಜೆಪಿಯಿಂದ ಖಾಲಿ ಮಾಡಿಸಿದರು. ನನ್ನನ್ನು ಬಿಟ್ಟಿದ್ದಕ್ಕೆ 5 ಕ್ಷೇತ್ರ ಹೋಗುತ್ತೆ ಎಂದು ಜನರೇ ಹೇಳಿದ್ದರು. ಹಾಗೆಯೇ ಆಗಿದೆ ಎಂದು ಹೇಳಿದ್ದಾರೆ.