ಪಕ್ಕದ ಮನೆಯಲ್ಲಿರುವವರು ಪ್ರತಿದಿನ ಸಂಭೋಗ ಕ್ರಿಯೆ ನಡೆಸುತ್ತಿರುವಾಗ ಬರುವ ಶಬ್ಧದಿಂದ ನನ್ನ ನಿದ್ದೆ, ನೆಮ್ಮದಿ ಹಾಳಾಗುತ್ತಿದೆ ಎಂದು ಮಹಿಳೆಯೊಬ್ಬರು ನೆರೆಹೊರೆಯವರಿಗೆ ಶಾಂತಿ ನೀಡಿ ಎಂದು ಬರೆದಿರುವ ಪತ್ರ ವೈರಲ್ ಆಗಿದೆ.
ಪ್ರಸ್ತುತ ವೈರಲ್ ಆಗುತ್ತಿರುವ ಟ್ವೀಟ್‌ನಲ್ಲಿ ‘ali in my marinera’ ಎಂಬ ಹೆಸರಿನ ಟ್ವಿಟರ್ ಬಳಕೆದಾರರು ತಮ್ಮ ನೆರೆಮನೆಯವರ ಸಂಭೋಗ ಕ್ರಿಯೆಯ ವೇಳೆ ಕೇಳಿ ಬರುವ ಸದ್ದಿನಿಂದ ಹೇಗೆ ಸಮಸ್ಯೆ ಎದುರಿಸುತ್ತಿದ್ದಾರೆಂದು ಹಂಚಿಕೊಂಡಿದ್ದಾರೆ.
ತನ್ನ ನೆರೆಮನೆಯವರಿಂದಾಗಿ ನಿದ್ರಿಸುವಾಗ ನಿರಂತರ ಅಡಚಣೆಯಾಗುತ್ತಿದೆ. ಪ್ರತಿದಿನ ಅವರ ಸಂಭೋಗ ಕ್ರಿಯೆಯ ಶಬ್ದ ಕೇಳದೇ ನಾನು ಮಲಗುವ ಕೋಣೆಗೆ ಪ್ರವೇಶಿಸಲು ಸಾಧ್ಯವಾಗದೇ ಇರುವುದರಿಂದ ತನ್ನ ಮಾನಸಿಕ ನೆಮ್ಮದಿ ಕಳೆದುಕೊಳ್ಳುತ್ತಿದ್ದೇನೆ. ಅವರು ನನ್ನನ್ನು ರಾತ್ರಿಯೆಲ್ಲಾ ಎಚ್ಚರವಾಗಿರುವಂತೆ ಮಾಡುತ್ತಾರೆ ಮತ್ತು ಬೆಳಿಗ್ಗೆಯೇ ನನ್ನನ್ನು ಎಚ್ಚರಗೊಳಿಸುತ್ತಿದ್ದಾರೆ, ಅದು ಹುಚ್ಚುತನವಾಗಿದೆ ಎಂದು ಮಹಿಳೆ ಉಲ್ಲೇಖಿಸಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ, ಅವರು ತನ್ನ ನೆರೆಮನೆಯವರಿಗಾಗಿ ಬರೆದ ಪತ್ರವನ್ನು ಎರಡು ಬಾಟಲಿಗಳ ಬಿಯರ್‌ನೊಂದಿಗೆ ಹಂಚಿಕೊಂಡಿದ್ದಾರೆ. ಆ ಪತ್ರದಲ್ಲಿ, “ಹೇ ನೆರೆಮನೆಯವರೇ, ನಮ್ಮ ಮನೆಗಳ ನಡುವಿನ ಗೋಡೆಗಳು ನೀವು ಯೋಚಿಸುವುದಕ್ಕಿಂತ ಹೆಚ್ಚು ತೆಳ್ಳಗಿರುತ್ತವೆ ಎಂಬ ಸ್ನೇಹಪರ ಜ್ಞಾಪನೆ. ನಿಮ್ಮ ಅತ್ಯಂತ ಆರೋಗ್ಯಕರ ಲೈಂಗಿಕ ಜೀವನಕ್ಕಾಗಿ ಅಭಿನಂದನೆಗಳು. ಆದಾಗ್ಯೂ ನಾನು ಅದರ ಭಾಗವಾಗದಿರಲು ಬಯಸುತ್ತೇನೆ ಮತ್ತು ನೀವೂ ಅದನ್ನೇ ಬಯಸುತ್ತೀರಿ ಎಂದು ನನಗೆ ಖಾತ್ರಿಯಿದೆ ಎಂದಿದ್ದಾರೆ. ಈ ಮೂಲಕ ಬಿಯರ್ ಬಾಟಲಿ ತೆಗೆದುಕೊಂಡು ಶಬ್ಧ ಕಡಿಮೆ ಮಾಡಿ ನನಗೆ ಶಾಂತಿ ನೀಡಿ ಎನ್ನುವಂತೆ ನೆರೆಮನೆಯವರಿಗೆ ಮನವಿ ಮಾಡಿದ್ದಾರೆ.
ನಂತರ ಮತ್ತೊಂದು ಟ್ವೀಟ್ ಮಾಡಿರುವ ಮಹಿಳೆ “ಅಪ್ಡೇಟ್!! ಅವರು ಇಂದು ಟಿಪ್ಪಣಿ ಮತ್ತು ಬಿಯರ್‌ಗಳನ್ನು ತೆಗೆದುಕೊಂಡಿದ್ದಾರೆ !! ನನ್ನ ಬಾಗಿಲಲ್ಲಿ ಯಾವುದೇ ಪತ್ರ ಉಳಿದಿಲ್ಲ, ಆದ್ದರಿಂದ ಅವರು ಬಹುಶಃ ಹಾಸಿಗೆಯನ್ನು ಸರಿಸಬಹುದೆ ??” ಎಂದು ಉಲ್ಲೇಖಿಸಿದ್ದಾರೆ. ಮುಂದುವರೆದು “ಹುಡುಗರೇ ಅವರು ಹಾಸಿಗೆಯನ್ನು ಸರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ!!!! ನೆರೆಮನೆಯ ವ್ಯಕ್ತಿ ತನ್ನ ಗಂಟಲು ಸರಿಮಾಡಿಕೊಂಡಿರುವಂತಿದೆ. ಮೊದಲು ಇದ್ದುದ್ದಕ್ಕಿಂತ ಹೆಚ್ಚಿನ ದೂರದಲ್ಲಿ ಈಗ ಸದ್ದು ಧ್ವನಿಸುತ್ತದೆ” ಎಂದು ಬರೆದಿದ್ದಾರೆ. ನೆರೆಮನೆಯವರಿಗೆ ಮಹಿಳೆ ಮಾಡಿದ ಮನವಿಯ ರೀತಿಗೆ ಹಲವು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.