alex Certify ಕಿವಿ ನೋವಿಗೆ ಅಸಲಿ ಕಾರಣ ಮತ್ತು ಸುಲಭದ ಮನೆಮದ್ದುಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿವಿ ನೋವಿಗೆ ಅಸಲಿ ಕಾರಣ ಮತ್ತು ಸುಲಭದ ಮನೆಮದ್ದುಗಳು

ಕಿವಿ ನೋವು ಸಾಮಾನ್ಯ ಸಮಸ್ಯೆಯಾದರೂ ಅದನ್ನು ಅನುಭವಿಸುವುದು ಮಾತ್ರ ಬಹಳ ಕಷ್ಟ. ತಡೆದುಕೊಳ್ಳಲು ಅಸಾಧ್ಯವಾದ ನೋವು ನಮ್ಮನ್ನು ಹೈರಾಣು ಮಾಡಿಬಿಡುತ್ತದೆ. ಸಾಮಾನ್ಯವಾಗಿ ಕಿವಿ ನೋವು ಶೀತ ಅಥವಾ ಇತರ ಸೋಂಕಿನಿಂದ ಉಂಟಾಗುತ್ತದೆ. ಕಿವಿ ನೋವಿದ್ದಾಗ ಸಾಧ್ಯವಾದಷ್ಟು ಬೇಗ ತಜ್ಞ ವೈದ್ಯರನ್ನು ಭೇಟಿ ಮಾಡುವುದು ಮುಖ್ಯ. ಆದರೆ ವೈದ್ಯರು ಹತ್ತಿರದಲ್ಲಿ ಇಲ್ಲದಿದ್ದಾಗ ಮನೆಯಲ್ಲಿ ಕೆಲವು ಮದ್ದುಗಳನ್ನು ಮಾಡಬಹುದು.

ಕಿವಿಯ ಮಧ್ಯದಿಂದ ಗಂಟಲಿನ ಹಿಂಭಾಗದವರೆಗೆ ದ್ರವವನ್ನು ಉತ್ಪಾದಿಸುವ ಯುಸ್ಟಾಚಿಯನ್ ಟ್ಯೂಬ್ ಇದೆ. ಈ ಟ್ಯೂಬ್‌ನಲ್ಲಿನ ಅಡಚಣೆಯಿಂದಾಗಿ, ದ್ರವವು ಸಂಗ್ರಹವಾದಾಗ ಕಿವಿಯೋಲೆಯ ಮೇಲೆ ಒತ್ತಡವು ಹೆಚ್ಚಾಗುತ್ತದೆ. ಇದು ನೋವಿನ ನಿಜವಾದ ಕಾರಣ. ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡದಿದ್ದರೆ ಸೋಂಕು ಇನ್ನಷ್ಟು ಹೆಚ್ಚಾಗಬಹುದು.

ಕಿವಿ ನೋವಿನ ನಿಜವಾದ ಕಾರಣಗಳು

ಶೀತ ಮತ್ತು ಜ್ವರ ದೀರ್ಘಕಾಲದವರೆಗೆ ಮುಂದುವರಿದರೆ ಅದು ಕಿವಿ ನೋವಿಗೆ ಕಾರಣವಾಗಬಹುದು.ಕೆಲವೊಮ್ಮೆ ಕಿವಿಯೋಲೆ ಸಮಸ್ಯೆಯಿಂದಾಗಿಯೂ ನೋವು ಕಾಣಿಸಿಕೊಳ್ಳುತ್ತದೆ. ದೊಡ್ಡ ಶಬ್ಧ, ತಲೆಗೆ ಗಾಯ, ಕಿವಿಯಲ್ಲಿ ಯಾವುದೇ ವಸ್ತು ಅಥವಾ ಕೀಟಗಳು ಸೇರಿಕೊಂಡರೆ, ಪರದೆ ಒಡೆದು ಹೋದರೆ ನೋವಾಗುತ್ತದೆ.ಈಜುವುದು ಅಥವಾ ಸ್ನಾನ ಮಾಡುವುದರಿಂದ ಕಿವಿಗೆ ನೀರು ಸೇರಿಕೊಳ್ಳುತ್ತದೆ. ಇದರಿಂದಲೂ ಕಿವಿ ನೋವು ಬರಬಹುದು.

ಕಾಲಕಾಲಕ್ಕೆ ಕಿವಿಯ ಮೇಣವನ್ನು ಸ್ವಚ್ಛಗೊಳಿಸಬೇಕು, ಇಲ್ಲದಿದ್ದರೆ ಅದರಿಂದಲೂ ನೋವು ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಕಿವಿ ನೋವಿನ ಸಾಮಾನ್ಯ ಕಾರಣವೆಂದರೆ ಓಟಿಟಿಸ್. ಇದು ಸೋಂಕಿನಿಂದ ಉಂಟಾಗುತ್ತದೆ.ಹಲ್ಲುಗಳಲ್ಲಿನ ಬ್ಯಾಕ್ಟೀರಿಯಾದ ಸೋಂಕು ಕೂಡ ಕಿವಿ ನೋವಿಗೆ ಕಾರಣವಾಗಬಹುದು.ದವಡೆಯಲ್ಲಿ ಊತವು ಕಿವಿಯಲ್ಲಿ ನೋವನ್ನು ಉಂಟುಮಾಡಬಹುದು.

ಕಿವಿಯಲ್ಲಿ ಮೊಡವೆ ಇದ್ದರೆ ಅದು ನೋವನ್ನು ಉಂಟುಮಾಡುತ್ತದೆ. ವಿಮಾನ ಲ್ಯಾಂಡಿಂಗ್ ಅಥವಾ ಟೇಕ್ ಆಫ್ ಸಮಯದಲ್ಲಿ ವಾತಾವರಣದ ಒತ್ತಡದಲ್ಲಿನ ಬದಲಾವಣೆಯಿಂದಾಗಿ ಕಿವಿ ನೋವು ಉಂಟಾಗುತ್ತದೆ. ಸೈನಸ್ ಸೋಂಕಿನಿಂದಾಗಿ, ಕಿವಿ ನೋವಿನ ಸಮಸ್ಯೆಯೂ ಉದ್ಭವಿಸುತ್ತದೆ.

ಕಿವಿ ನೋವಿಗೆ ಪರಿಹಾರಗಳು

ಕಿವಿ ನೋವನ್ನು ತಪ್ಪಿಸಲು ತಣ್ಣನೆಯ ವಸ್ತುಗಳಿಂದ ದೂರವಿಡಿ. ಸ್ನಾನ ಮಾಡುವಾಗ ಎಚ್ಚರಿಕೆ ವಹಿಸಿ ಮತ್ತು ಕಿವಿಯಲ್ಲಿ ನೀರು ಸೇರದಂತೆ ನೋಡಿಕೊಳ್ಳಿ.ಜೋರಾಗಿ ಸಂಗೀತ ಅಥವಾ ಇತರ ಶಬ್ದಗಳನ್ನು ಕೇಳುವುದನ್ನು ತಪ್ಪಿಸಿ. ಹಳಸಿದ ಅಥವಾ ಜಂಕ್ ಫುಡ್ ತಿನ್ನುವ ಅಭ್ಯಾಸವನ್ನು ಬಿಡುವುದು ಉತ್ತಮ. ಯಾವುದೇ ಅಪಾಯಕಾರಿ ವಸ್ತುಗಳಿಂದ ಕಿವಿಯನ್ನು ಸ್ವಚ್ಛಗೊಳಿಸಲು ಪ್ರಯತ್ನಿಸಬೇಡಿ.

ಕಿವಿ ನೋವಿಗೆ ಮನೆಮದ್ದು

ಬೆಳ್ಳುಳ್ಳಿಸಾಸಿವೆ ಎಣ್ಣೆಯಲ್ಲಿ ಸಣ್ಣದಾಗಿ ಕೊಚ್ಚಿದ ಬೆಳ್ಳುಳ್ಳಿಯ 2 ಎಸಳುಗಳನ್ನು ಬಿಸಿ ಮಾಡಿ ಮತ್ತು ತಣ್ಣಗಾದ ನಂತರ ಅದನ್ನು ಫಿಲ್ಟರ್ ಮಾಡಿ. 2 ರಿಂದ 3 ಹನಿಗಳಷ್ಟು ಈ ಎಣ್ಣೆಯನ್ನು ಕಿವಿಗೆ ಹಾಕಿದರೆ ನೋವಿನಿಂದ ಪರಿಹಾರ ಸಿಗುತ್ತದೆ.

ಈರುಳ್ಳಿ ಒಂದು ಚಮಚ ಈರುಳ್ಳಿ ರಸವನ್ನು ಲಘುವಾಗಿ ಬಿಸಿ ಮಾಡಿ 2 ರಿಂದ 3 ಹನಿಗಳನ್ನು ಕಿವಿಗೆ ಹಾಕಿದರೆ ನೋವು ಕಡಿಮೆಯಾಗುತ್ತದೆ. ಈ ವಿಧಾನವನ್ನು ದಿನಕ್ಕೆ 3 ಬಾರಿ ಪುನರಾವರ್ತಿಸಿ.

ತುಳಸಿತುಳಸಿ ಎಲೆಗಳ ತಾಜಾ ರಸವನ್ನು ಕಿವಿಗೆ ಹಾಕಿದರೆ 1-2 ದಿನಗಳಲ್ಲಿ ಕಿವಿನೋವು ಸಂಪೂರ್ಣವಾಗಿ ಗುಣವಾಗುತ್ತದೆ.

ಕಹಿಬೇವುಕಹಿಬೇವಿನ ಸೊಪ್ಪಿನ ರಸವನ್ನು ತೆಗೆದು 2 ರಿಂದ 3 ಹನಿಗಳನ್ನು ಕಿವಿಗೆ ಹಾಕಿದರೆ ಕಿವಿ ನೋವು ಮತ್ತು ಸೋಂಕು ನಿವಾರಣೆಯಾಗುತ್ತದೆ.

ಶುಂಠಿ–  ಶುಂಠಿಯ ರಸವನ್ನು ತೆಗೆದುಕೊಂಡು 2 ರಿಂದ 3 ಹನಿಗಳನ್ನು ಕಿವಿಗೆ ಹಾಕಿ. ಇದಲ್ಲದೇ ಶುಂಠಿಯನ್ನು ಪುಡಿಮಾಡಿ ಆಲಿವ್ ಎಣ್ಣೆಯಲ್ಲಿ ಬೆರೆಸಿ ಕುದಿಸಿ. ತಣ್ಣಗಾದ ಬಳಿಕ ಅದನ್ನು ಫಿಲ್ಟರ್ ಮಾಡಿ 2-3 ಹನಿಗಳನ್ನು ಕಿವಿಗೆ ಹಾಕಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...