ಪಾತ್ರೆ ತೊಳೆಯಲು ಈಗ ಬಗೆ ಬಗೆಯ ಸೋಪ್, ಲಿಕ್ವಿಡ್ ಡಿಶ್ ಸೋಪ್ ಗಳಿವೆ. ಆದರೂ ಭಾರತದಲ್ಲಿರುವ ಹಲವು ಹಳ್ಳಿಗಳಲ್ಲಿ ಹಿಂದಿನ ಕಾಲದಲ್ಲಿ ಪಾತ್ರೆ ತೊಳೆಯಲು ಬಳಸುತ್ತಿದ್ದ ವಸ್ತುಗಳನ್ನೇ ಈಗಲೂ ಬಳಸುತ್ತಿದ್ದಾರೆ.
ಮರಳು, ಮಣ್ಣು, ಬೂದಿ, ಇಟ್ಟಿಗೆ ಮಣ್ಣು, ಹುಣಸೆಹಣ್ಣಿನಿಂದ ಪಾತ್ರೆಯನ್ನ ತಿಕ್ಕಿ ತೊಳೆಯುತ್ತಾರೆ. ಅಂತಹ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ.
ಮದುವೆ ಸಮಾರಂಭವೊಂದರಲ್ಲಿ ಮರಳಿನಿಂದ ಪಾತ್ರೆಗಳನ್ನ ಪುರುಷರ ಗುಂಪೊಂದು ಸ್ವಚ್ಛಗೊಳಿಸ್ತಿದೆ. ಈ ವಿಡಿಯೋ ವೈರಲ್ ಆಗ್ತಿದ್ದಂತೆ ಸಾಮಾಜಿಕ ಜಾಲತಾಣ ಬಳಕೆದಾರರು ಈ ಕ್ರಮವನ್ನ ಟೀಕಿಸಿದ್ದಾರೆ.
ಕೆಲವರು ಇದು ಪರಿಸರ ಸ್ನೇಹಿ, ಎಣ್ಣೆ ಜಿಡ್ಡು ತೆಗೆಯಲು ಇದು ಸುಲಭ ವಿಧಾನ ಎಂದಿದ್ದಾರೆ. ಕೆಲವರು ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಈ ವಿಡಿಯೋ ಭಾರೀ ವೀಕ್ಷಣೆ ಗಳಿಸಿದೆ. ಇನ್ನೂ ಹಲವು ಹಳ್ಳಿಗಳಲ್ಲಿ ಮಣ್ಣು ಅಥವಾ ಬೂದಿಯಿಂದ ತೆಂಗಿನ ನಾರನ್ನ ಬಳಸಿ ಪಾತ್ರೆ ಸ್ವಚ್ಛಗೊಳಿಸುವುದನ್ನ ಕಾಣಬಹುದು.