ಕುಡಿದ ಮತ್ತಲ್ಲಿ ಮಧ್ಯರಾತ್ರಿ ಗೂಳಿ ಮೇಲೆ ಕೂತು ಸವಾರಿ ಮಾಡಿದ್ದ ಯುವಕನನ್ನು ಉತ್ತರಖಂಡ ಪೊಲೀಸರು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಬೀದಿಯಲ್ಲಿ ಗೂಳಿಯ ಮೇಲೆ ಸವಾರಿ ಮಾಡುತ್ತಿದ್ದ. ವೀಡಿಯೊವನ್ನು ರಿಷಿಕೇಶದ ತಪೋವನ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದೆ ಎಂದು ಉತ್ತರಾಖಂಡ್ ಪೊಲೀಸರು ತಿಳಿಸಿದ್ದಾರೆ.
ಯುವಕನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಮತ್ತು ಭವಿಷ್ಯದಲ್ಲಿ ಪ್ರಾಣಿಗಳೊಂದಿಗೆ ಇಂತಹ ಸಾಹಸಗಳನ್ನು ಮಾಡದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಪಡೆ ತಿಳಿಸಿದೆ.
ತಡರಾತ್ರಿಯ ಘಟನೆಯನ್ನು ವಿವರಿಸುತ್ತಾ ಉತ್ತರಾಖಂಡ್ ಪೊಲೀಸರು ಟ್ವೀಟ್ ಮಾಡಿದ್ದು “ಮೇ 5 ರಂದು ತಡರಾತ್ರಿ ಋಷಿಕೇಶದ ತಪೋವನದಲ್ಲಿ ಕುಡುಕ ಯುವಕನೊಬ್ಬ ಗೂಳಿಯ ಮೇಲೆ ಸವಾರಿ ಮಾಡಿದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾದ ವೀಡಿಯೊವನ್ನು ಗಮನದಲ್ಲಿಟ್ಟುಕೊಂಡು, ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದ್ದು ಭವಿಷ್ಯದಲ್ಲಿ ಈ ರೀತಿ ಪ್ರಾಣಿಗಳೊಂದಿಗೆ ಅನುಚಿತವಾಗಿ ವರ್ತಿಸದಂತೆ ಯುವಕರಿಗೆ ಎಚ್ಚರಿಕೆ ನೀಡಲಾಗಿದೆ” ಎಂದಿದ್ದಾರೆ
ಅನೇಕ ಜನರು ಈ ವೀಡಿಯೊದಿಂದ ಆಘಾತಕ್ಕೊಳಗಾಗಿದ್ದರೆ ಮತ್ತು ಇಂತಹ ವರ್ತನೆ ಸರಿಯಲ್ಲ ಎಂದಿದ್ದು ಅದನ್ನು ಜಲ್ಲಿಕಟ್ಟುಗೆ ಹೋಲಿಸಿದ್ದು ಯುವಕನು ಕಾನೂನು ಕ್ರಮ ತೆಗೆದುಕೊಳ್ಳುವಂತಹ ಕೆಲಸವನ್ನೇನೂ ಮಾಡಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
https://twitter.com/uttarakhandcops/status/1655530072953212928?ref_src=twsrc%5Etfw%7Ctwcamp%5Etweetembed%7Ctwterm%5E1655530072953212928%7Ctwgr%5Ef88818129ec9dd5c33dd8417ef26dbfa65970574%7Ctwcon%5Es1_&ref_url=https%3A%2F%2Fwww.ndtv.com%2Foffbeat%2Fwatch-drunk-man-rides-bull-at-night-in-rishikesh-police-take-legal-action-4018145