ಅಮೆರಿಕದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ತರಗತಿಯಲ್ಲಿ ತನ್ನ ಫೋನ್ ತೆಗೆದುಕೊಂಡು ಹೋದ ನಂತರ ಶಿಕ್ಷಕನಿಗೆ ಎರಡು ಬಾರಿ ಪೆಪ್ಪರ್ ಸ್ಪ್ರೇ ಮಾಡಿದ ಘಟನೆ ನಡೆದಿದೆ.
ಕಳೆದ ವಾರ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿ ಆಕ್ರೋಶಕ್ಕೆ ಕಾರಣವಾಗಿದೆ. ಘಟನೆಯು ಟೆನ್ನೆಸ್ಸಿಯ ನ್ಯಾಶ್ವಿಲ್ಲೆ ಬಳಿಯ ಆಂಟಿಯೋಕ್ ಪ್ರೌಢಶಾಲೆಯಲ್ಲಿ ನಡೆದಿದೆ.
ವಿದ್ಯಾರ್ಥಿನಿ ಬಳಿ ಇದ್ದ ಮೊಬೈಲ್ ಫೋನ್ ಅನ್ನು ಶಿಕ್ಷಕ ಪಡೆದುಕೊಂಡ ನಂತರ ಆತನಿಗೆ ಫೋನ್ ವಾಪಸ್ ನೀಡುವಂತೆ ಕೇಳಿಕೊಳ್ಳುತ್ತಾಳೆ. ಅವರು ತರಗತಿಯಿಂದ ಹೊರ ಹೋದಾಗ ಹಿಂಬಾಲಿಸಿಕೊಂಡು ಹೋಗಿ ಶಿಕ್ಷಕರಿಗೆ ಪೆಪ್ಪರ್-ಸ್ಪ್ರೇ ಮಾಡಿದ್ದಾಳೆ.
ಅವಳು ಶಿಕ್ಷಕನ ಕೈಯಿಂದ ತನ್ನ ಫೋನ್ ಹಿಡಿಯಲು ಪ್ರಯತ್ನಿಸಿದಾಗ, ಶಿಕ್ಷಕ ಬಿಡುವುದಿಲ್ಲ ನಂತರ ವಿದ್ಯಾರ್ಥಿನಿ ಅವನಿಗೆ ಮತ್ತೆ ಪೆಪ್ಪರ್-ಸ್ಪ್ರೇ ಮಾಡುತ್ತಾಳೆ. ಶಿಕ್ಷಕ ಅಳುತ್ತಾ ನೆಲಕ್ಕೆ ಬೀಳುತ್ತಾನೆ. ಆದರೆ, ವಿದ್ಯಾರ್ಥಿನಿ ತನ್ನ ಫೋನ್ ವಾಪಸ್ ಬೇಕು ಎಂದು ಹೇಳುತ್ತಾಳೆ.
ಪೆಪ್ಪರ್ ಸ್ಪ್ರೇಯಿಂದ ಶಿಕ್ಷಕ ಚೇತರಿಸಿಕೊಳ್ಳಲು ಪ್ರಯತ್ನಿಸಿದಾಗ ಪಕ್ಕದ ತರಗತಿಯ ಇನ್ನೊಬ್ಬ ಶಿಕ್ಷಕ ಫೋನ್ ಹಿಂತಿರುಗಿಸಲು ಸಾಧ್ಯವಿಲ್ಲ ಎಂದು ಹುಡುಗಿಗೆ ಹೇಳುತ್ತಾನೆ. ವಿದ್ಯಾರ್ಥಿನಿಯ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.