ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿಯ ಪ್ರಮಾಣೀಕರಣವಿಲ್ಲದೆ ಯಾವುದೇ ಪಕ್ಷ ಅಥವಾ ಅಭ್ಯರ್ಥಿಯು ಮತದಾನದ ದಿನ ಮತ್ತು ಮತದಾನಕ್ಕೂ ಒಂದು ದಿನದ ಮೊದಲು ಮುದ್ರಣ ಮಾಧ್ಯಮದಲ್ಲಿ ಯಾವುದೇ ಜಾಹೀರಾತುಗಳನ್ನು ಪ್ರಕಟಿಸಬಾರದು ಎಂದು ಚುನಾವಣಾ ಆಯೋಗವು ತಿಳಿಸಿದೆ. ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಮೇ 10 ರಂದು ನಡೆಯಲಿದ್ದು ಮತದಾನಕ್ಕೂ ಮುನ್ನ ತನ್ನ ಸಲಹೆಯಲ್ಲಿ ಚುನಾವಣಾ ಆಯೋಗ ಹೇಳಿದೆ.
ರಾಜಕೀಯ ಪಕ್ಷಗಳಿಗೆ ನೀಡಿದ ಸಲಹೆಯಲ್ಲಿ ಚುನಾವಣಾ ಆಯೋಗವು “ಸ್ವಚ್ಛ ಮತ್ತು ಗಂಭೀರ” ಪ್ರಚಾರಕ್ಕೆ ಒತ್ತು ನೀಡಿದೆ.
ಪತ್ರಿಕೋದ್ಯಮದ ನಡವಳಿಕೆಗಾಗಿ ಭಾರತೀಯ ಪತ್ರಿಕಾ ಮಂಡಳಿಯ ನಿಯಮಗಳು ತಮ್ಮ ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳು ಸೇರಿದಂತೆ ಎಲ್ಲಾ ವಿಷಯಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡುತ್ತದೆ ಎಂದು ಸಂಪಾದಕರಿಗೆ ಬರೆದ ಪ್ರತ್ಯೇಕ ಪತ್ರದಲ್ಲಿ ಚುನಾವಣಾ ಆಯೋಗವು (EC) ಸ್ಪಷ್ಟಪಡಿಸಿದೆ.
ಜವಾಬ್ದಾರಿಯನ್ನು ನಿರಾಕರಿಸಿದರೆ, ಇದನ್ನು ಮೊದಲೇ ಸ್ಪಷ್ಟವಾಗಿ ತಿಳಿಸಬೇಕು ಎಂದು ಆಯೋಗವು ಕರ್ನಾಟಕದ ಪತ್ರಿಕೆಗಳ ಸಂಪಾದಕರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರ ಇಂದು ಸಂಜೆ ವೇಳೆಗೆ ಅಂತ್ಯಗೊಳ್ಳಲಿದೆ.