ಸುದೀಪ್ತೋ ಸೇನ್ ಅವರ ಇತ್ತೀಚಿನ ಮತ್ತು ವಿವಾದಾತ್ಮಕ ಚಲನಚಿತ್ರ ‘ದಿ ಕೇರಳ ಸ್ಟೋರಿ’ ವಿವಾದದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳಿಂದಾಗಿ ತಮಿಳುನಾಡಿನ ಥಿಯೇಟರ್ ಮಾಲೀಕರು ಚಿತ್ರ ಪ್ರದರ್ಶಿಸುವುದನ್ನು ನಿಲ್ಲಿಸಿದ್ದಾರೆ.
ಟ್ರೇಲರ್ ಹೊರಬಂದಾಗಿನಿಂದ ಈ ಚಿತ್ರವು ವಿವಾದದ ಸುಳಿಯಲ್ಲಿ ಸಿಲುಕಿದೆ. ಚಿತ್ರದ ನಿರ್ಮಾಪಕರು ಇಸ್ಲಾಮಿಕ್ ಮತಾಂತರದ ಸುಳ್ಳು ನಿರೂಪಣೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ‘ದಿ ಕೇರಳ ಸ್ಟೋರಿ’ ಕಥೆಯು ಮೇ 5 ರಂದು ತೆರೆಗೆ ಬಂದಿತು. ಚಲನಚಿತ್ರದ ಕಳಪೆ ಪ್ರತಿಕ್ರಿಯೆ ಮತ್ತು ಕಾನೂನು ಸುವ್ಯವಸ್ಥೆ ಸಮಸ್ಯೆಗಳ ಕಾರಣದಿಂದ ಮೇ 7 ರಿಂದ ತಮಿಳುನಾಡಿನಲ್ಲಿ ಥಿಯೇಟರ್ ಮಾಲೀಕರು ಚಿತ್ರದ ಪ್ರದರ್ಶನವನ್ನು ನಿಲ್ಲಿಸಿದ್ದಾರೆ.
ಮೇ 6 ರಂದು ತಮಿಳುನಾಡಿನ ನಾಮ್ ತಮಿಳರ್ ಕಚ್ಚಿ(ಎನ್‌ಟಿಕೆ) ಚೆನ್ನೈನಲ್ಲಿ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿತು. ಥಿಯೇಟರ್‌ನಲ್ಲಿ ಪ್ರತಿಭಟನೆಯ ನಂತರ, ಎನ್‌ಟಿಕೆ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.