ಅಸ್ಸಾಂನ ಧುಬ್ರಿಯಲ್ಲಿರುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಪರೀಕ್ಷಾ ಕೇಂದ್ರದ ಬಳಿಯೇ ಫುಟ್ಬಾಲ್ ಪಂದ್ಯ ಆಯೋಜಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ಫುಟ್‌ಬಾಲ್ ಪಂದ್ಯವನ್ನು ಧುಬ್ರಿಯಲ್ಲಿರುವ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯಿಂದ ಕೇವಲ ಐದು ಮೀಟರ್ ದೂರದಲ್ಲಿರುವ ರಾಜ ಪ್ರಭಾತ್ ಚಂದ್ರ ಬರುವಾ ಮೈದಾನದಲ್ಲಿ ಆಯೋಜಿಸಲಾಗಿತ್ತು. ಅಲ್ಲಿ ನೀಟ್ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಮಹಿಳಾ ಫುಟ್‌ಬಾಲ್ ಪಂದ್ಯದ ಸಂಘಟನಾ ಸಮಿತಿಯು ಟೀಕೆಗೆ ಗುರಿಯಾಗಿದೆ. ಮೇ 7 ರಂದು ನೀಟ್ ಪರೀಕ್ಷೆಯು ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗುವ ಸ್ವಲ್ಪ ಸಮಯದ ನಂತರ ಪಂದ್ಯವು ನಡೆಯಲಿದೆ.
ಫುಟ್‌ಬಾಲ್ ಪಂದ್ಯದ ಆಯೋಜಕರು ನೀಟ್ ಪರೀಕ್ಷಾ ಕೇಂದ್ರಕ್ಕೆ ಹೋಗುವ ಅರ್ಧದಷ್ಟು ರಸ್ತೆಯನ್ನು ಮುಚ್ಚಿದ್ದಾರೆ. ಇದು ಸ್ಥಳೀಯ ನಿವಾಸಿಗಳು ಮತ್ತು ಸಾಮಾಜಿಕ ಕಾರ್ಯಕರ್ತರಲ್ಲಿ ಆತಂಕವನ್ನು ಉಂಟುಮಾಡಿದೆ. ಪಂದ್ಯದ ಗದ್ದಲವು ಪರೀಕ್ಷೆಗೆ ಅಡ್ಡಿಯಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ನೀಟ್ ಪರೀಕ್ಷೆಯು ಧುಬ್ರಿಯ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆಯ 14 ಇನ್ವಿಜಿಲೇಟರ್‌ಗಳು ಮತ್ತು ಶಿಕ್ಷಕರೊಂದಿಗೆ 168 ಪರೀಕ್ಷಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಮಹಿಳಾ ರೆಫರಿ ಮತ್ತು ಮಹಿಳಾ ಕಾಮೆಂಟೇಟರ್ ಒಳಗೊಂಡಿರುವ ಫುಟ್ಬಾಲ್ ಪಂದ್ಯವು ಹೆಚ್ಚಿನ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.