
ಮುಖೇಶ್ ಅಂಬಾನಿ ಏಷ್ಯಾದ ಅತ್ಯಂತ ಶ್ರೀಮಂತ ಉದ್ಯಮಿ. ಬಿಲಿಯನ್‌ಗಟ್ಟಲೆ ಸಂಪತ್ತು ಅವರ ಬಳಿಯಿದೆ. ಅಂಬಾನಿ ಕುಟುಂಬ ವಾಸವಾಗಿರುವ ಮನೆ 15,000 ಕೋಟಿಗಿಂತಲೂ ಹೆಚ್ಚು ಬೆಲೆಬಾಳುತ್ತದೆ. ಮುಂಬೈನ ಐಷಾರಾಮಿ ಪ್ರದೇಶದಲ್ಲಿರುವ ಆಂಟಿಲಿಯಾ ಬಂಗಲೆ ಭಾರತದಲ್ಲಿ ಮಾತ್ರವಲ್ಲದೆ ಇಡೀ ಏಷ್ಯಾದ ಅತ್ಯಂತ ದುಬಾರಿ ಮನೆ ಎಂದು ಹೇಳಲಾಗುತ್ತದೆ.
ಇದು ಮುಂಬೈನ ಕುಂಬಲ್ಲಾ ಹಿಲ್‌ನ ಅಲ್ಟಾಮೌಂಟ್ ರಸ್ತೆಯಲ್ಲಿದೆ. 4 ಲಕ್ಷ ಚದರ ಅಡಿ ವಿಸ್ತಾರದ ಆಂಟಿಲಿಯಾದಲ್ಲಿ ಮೂರು ಹೆಲಿಪ್ಯಾಡ್‌ಗಳು, 168 ಕಾರ್ ಪಾರ್ಕಿಂಗ್ ಲಾಟ್ 50 ಆಸನಗಳ ಸಿನೆಮಾ ಥಿಯೇಟರ್ ಎಲ್ಲವೂ ಇದೆ. ಮುಕೇಶ್ ಅಂಬಾನಿ, ಮಗ ಅನಂತ್‌ಗಾಗಿ 80 ಮಿಲಿಯನ್ ಡಾಲರ್ ಮೌಲ್ಯದ ವಿಲ್ಲಾವನ್ನು ದುಬೈನಲ್ಲಿ ಖರೀದಿಸಿದ್ದಾರೆ. ಸಮುದ್ರದ ಉತ್ತಮ ನೋಟವಿರುವ ಸುಂದರ ವಿಲ್ಲಾ ಇದು.
2021ರ ಏಪ್ರಿಲ್‌ನಲ್ಲಿ ಮುಖೇಶ್ ಅಂಬಾನಿ ಯುರೋಪ್‌ನಲ್ಲಿ ಸ್ಟಾಕ್ ಪಾರ್ಟ್ ಎಸ್ಟೇಟ್ ಅನ್ನು ಸಹ ಕೊಂಡುಕೊಂಡರು. ಇದು ಐಷಾರಾಮಿ ಹೋಟೆಲ್ ಮತ್ತು ಉನ್ನತ ದರ್ಜೆಯ ಗಾಲ್ಫ್ ಕೋರ್ಸ್ ಅನ್ನು ಹೊಂದಿದೆ. ಮುಖೇಶ್ ಅಂಬಾನಿ ಇದನ್ನು ಸುಮಾರು 592 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ. ಕೇವಲ ಮುಂಬೈನ ಆಂಟಿಲಿಯಾ ಬಂಗಲೆ ಮಾತ್ರವಲ್ಲ, ಜಗತ್ತಿನ ಮೂಲೆ ಮೂಲೆಯಲ್ಲೂ ಮುಖೇಶ್ ಅಂಬಾನಿ ಆಸ್ತಿ ಸಂಪಾದಿಸಿದ್ದಾರೆ. ಅವರ ಒಟ್ಟಾರೆ ಆಸ್ತಿ ಸರಿಸುಮಾರು 87.8 ಬಿಲಿಯನ್ ಡಾಲರ್. ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿರುವ ಮುಖೇಶ್ ಅಂಬಾನಿ, ಮುಟ್ಟಿದ್ದೆಲ್ಲ ಚಿನ್ನವಾಗ್ತಿದೆ ಅಂದ್ರೂ ತಪ್ಪೇನಿಲ್ಲ.