ಬಾಲ್ಯದ ದಿನಗಳ ಬಸ್ ಡ್ರೈವರ್ ನೆನಪಿಸಿಕೊಂಡ ಯುವಕ; ವಿದೇಶದಲ್ಲಿ ಖರೀದಿಸಿದ ಕಾರಿಗೂ ಅದೇ ನಂಬರ್….!

ಬಾಲ್ಯದಲ್ಲಿ ತಾನು ಓಡಾಡುತ್ತಿದ್ದ ಬಿಎಂಟಿಸಿ ಬಸ್ ಹಾಗೂ ಅದರ ಚಾಲಕನ ಕುರಿತು ಈಗಲೂ ಅಭಿಮಾನಿ ಹೊಂದಿರುವ ಯುವಕ, ವಿದೇಶದಲ್ಲಿ ತಾನು ಖರೀದಿಸಿದ ಹೊಸ ಕಾರಿಗೆ ಅದೇ ಬಸ್ಸಿನ ನಂಬರ್ ತೆಗೆದುಕೊಂಡಿರುವುದಲ್ಲದೆ ತನ್ನ ನೆಚ್ಚಿನ ಡ್ರೈವರ್ ಗೆ ಸಾಮಾಜಿಕ ಜಾಲತಾಣದ ಮೂಲಕ ವಿಡಿಯೋ ಕಳಿಸಿದ್ದು, ಅದೀಗ ವೈರಲ್ ಆಗಿದೆ.

ಧನಪಾಲ್ ಮಂಚೇನಹಳ್ಳಿ ಎಂಬವರು ಬಿಎಂಟಿಸಿ ಘಟಕ 11ರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಇವರ ಬಸ್ ಹಲವು ಶಾಲಾ ಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ಈ ಬಸ್ಸಿನಲ್ಲಿ ಆದಿತ್ಯ ಹಾಗೂ ಚಂಗಪ್ಪ ಎಂಬ ಇಬ್ಬರು ಬಾಲಕರು ಬಾನೆಟ್ ಮೇಲೆ ಕುಳಿತು ಪ್ರಯಾಣಿಸುತ್ತಿದ್ದರು.

ಇದೀಗ ಆದಿತ್ಯ ಜರ್ಮನಿಯಲ್ಲಿದ್ದರೆ, ಚಂಗಪ್ಪ ಅಮೆರಿಕದ ಕ್ಯಾಲಿಫೋರ್ನಿಯದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಚೆಂಗಪ್ಪ ಕಾರು ಒಂದನ್ನು ಖರೀದಿಸಿದ್ದು ಇದಕ್ಕೆ ಅಭಿಮಾನ ಪೂರ್ವಕವಾಗಿ ತಾನು ಬಾಲ್ಯದಲ್ಲಿ ಓಡಾಡುತ್ತಿದ್ದ ಬಸ್ಸಿನ ನಂಬರ್ KA-1, F-232 ಪಡೆದುಕೊಂಡಿದ್ದಾರೆ.

ಚಂಗಪ್ಪ ಹಾಗೂ ಆದಿತ್ಯ ಈಗಲೂ ಸಹ ಧನಪಾಲ್ ಅವರ ಜೊತೆಗೆ ಸಂಪರ್ಕದಲ್ಲಿದ್ದು, ತಮ್ಮ ಕಾರಿಗೆ F 232 ನಂಬರ್ ಪಡೆದುಕೊಂಡಿರುವ ಚಂಗಪ್ಪ ವಿಡಿಯೋ ಸಂದೇಶ ಮಾಡಿ ಧನಪಾಲ್ ಅವರಿಗೆ ಕಳುಹಿಸಿದ್ದಾರೆ. ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

https://www.facebook.com/100026716029944/videos/720783523068382

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read