ಚಿಕ್ಕಮಗಳೂರು: ಭಜರಂಗದಳ ಬ್ಯಾನ್ ಮಾಡುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹೇಳಿರುವ ವಿಚಾರವಾಗಿ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದು, ಭಜರಂಗಿಯನ್ನು ಕೆಣಕಿ ಉಳಿದವರಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗುಡುಗಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಕಾಂಗ್ರೆಸ್ ತಕ್ಷಣ ತನ್ನ ಪ್ರಣಾಳಿಕೆ ಹಿಂಪಡೆಯಬೇಕು, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ತ್ರೇತಾಯುಗದಲ್ಲಿ ಭಜರಂಗಿ ಕೆಣಕಿದ್ದ ರಾವಣ ಸರ್ವನಾಶವಾದ. ಆಂಜನೇಯನ ಬಾಲಕ್ಕೆ ಬೆಂಕಿ ಹಚ್ಚಿದ್ದಕ್ಕೆ ಲಂಕೆ ಸುಟ್ಟು ಹೋಯ್ತು. ಈಗ ಕಾಂಗ್ರೆಸ್ ನವರು ಭಜರಂಗದಳವನ್ನು ಕೆಣಕಿದ್ದಾರೆ. ಕಾಂಗ್ರೆಸ್ ಅದೇ ಕಾರಣಕ್ಕೆ ರಾಜಕೀಯವಾಗಿ ನಾಶವಾಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.