ಹಠಾತ್ ಮಳೆಯಿಂದಾಗಿ ರಸ್ತೆಯಲ್ಲಿ ನೀರು ತುಂಬುವುದು, ಕೆಸರು ಗದ್ದೆಯಂತೆ ರಸ್ತೆಗಳು ಬದಲಾಗುವುದು ಸಾಮಾನ್ಯ. ಕೆಲವೊಮ್ಮೆ ರಸ್ತೆಗಳಲ್ಲಿ ವಾಹನಗಳು ಜಾರುವುದೂ ಇದೆ.
ಇಂತಹ ಸಂದರ್ಭದಲ್ಲಿ ಮುಂಬೈ ಪೊಲೀಸರೊಬ್ಬರು ತಾವೇ ಮುಂದೆ ಬಂದು ವಾಹನ ಸವಾರರು ಜಾರಿ ಬೀಳುತ್ತಿದ್ದ ಜಾಗದಲ್ಲಿ ಮಣ್ಣು ತುಂಬಿ ಸರಿಮಾಡಿದ್ದಾರೆ. ಇವರ ಕಾರ್ಯದ ಫೋಟೋವನ್ನ ನೆಟ್ಟಿಗರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಟ್ವಿಟರ್ ಬಳಕೆದಾರ ವೈಭವ್ ಪರ್ಮಾರ್ ಈ ಬಗ್ಗೆ ವಿಷಯ ಹಂಚಿಕೊಂಡಿದ್ದು ಇಂದು ಭಾಂಡಪ್ ಪಂಪಿಂಗ್ ಸಿಗ್ನಲ್‌ನಲ್ಲಿ ಮಳೆಯಿಂದಾಗಿ ಅನೇಕ ಬೈಕ್‌ಗಳು ಜಾರಿಬೀಳುತ್ತಿವೆ. ಓರ್ವ ಟ್ರಾಫಿಕ್ ಅಧಿಕಾರಿ ಅಗ್ನಿಶಾಮಕ ದಳಕ್ಕೆ ಕರೆ ಮಾಡಿದರು. ಆದರೆ ಓರ್ವ ಪೊಲೀಸ್ ಸುಮ್ಮನೇ ಕಾಯುತ್ತಾ ನಿಲ್ಲಲಿಲ್ಲ. ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ರಸ್ತೆಗೆ ಧೂಳು, ಮಣ್ಣನ್ನು ಹಾಕಿ ಭದ್ರಪಡಿಸಿದರು. ಇವರಿಗೆ ನಮಸ್ಕಾರ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರರು ಇದಕ್ಕೆ ಪ್ರತಿಕ್ರಿಯಿಸಿದ್ದು ಪೊಲೀಸ್ ಕಾರ್ಯವನ್ನು ಮೆಚ್ಚಿಕೊಂಡಿದ್ದಾರೆ.