![](https://kannadadunia.com/wp-content/uploads/2023/01/966585-pm-narendra-modi.jpg)
ಮಂಗಳೂರು: ಕರಾವಳಿ ಕರ್ನಾಟಕಕದಲ್ಲಿ ಅಬ್ಬರದ ಚುನಾವಣ ಪ್ರಚಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಮಂಗಳೂರಿನಲ್ಲಿ ಬಿಜೆಪಿ ಸಮಾವೇಶದಲ್ಲಿ ತುಳು ಭಾಷೆಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ, ಪರಶುರಾಮ ಕ್ಷೇತ್ರದ ಮುಲ್ಕಿ ವೆಂಕಟರಮಣ ಸ್ವಾಮಿಗೆ ನಮಸ್ಕಾರಗಳು. ಕಳೆದ ವರ್ಷ ನನಗೆ ನಾರಾಯಣಗುರು ಮಠದ ಶ್ರೀಗಳ ಆಶಿರ್ವಾದ ಪಡೆಯಲು ಅವಕಾಶ ಸಿಕ್ಕಿತ್ತು. ಪೂಜ್ಯರ ಆಶಿರ್ವಾದದಿಂದ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಸಾಧ್ಯವಾಯಿತು. ಕರ್ನಾಟಕವನ್ನು ಉತ್ಪಾದನೆಯ ಅತಿ ದೊಡ್ಡ ಶಕ್ತಿ ರಾಜ್ಯವನ್ನಾಗಿ ಮಾಡುವ ಸಂಕಲ್ಪ ಮಾಡಿದ್ದೇವೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಆರಂಭಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ನವರು ಮತ ಯಾಕೆ ಕೇಳುತ್ತಿದ್ದಾರೆ? ಅವರ ಒಬ್ಬ ನಾಯಕ ನಿವೃತ್ತಿ ಹೊಂದುತ್ತಿದ್ದಾರೆ. ಅವರನ್ನು ಗೆಲ್ಲಿಸಲು ಮತ ಕೇಳುತ್ತಿದ್ದಾರೆ. ಕಾಂಗ್ರೆಸ್ ಬಿಜೆಪಿಯ ಎಲ್ಲಾ ಯೋಜನೆಗಳನ್ನು ನಾಶ ಮಾಡಲು ಮತ ಕೇಳುತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಗೆ ರಾಜ್ಯವನ್ನು ಎಟಿಎಂ ಮಾಡಬೇಕಿದೆ. ದೆಹಲಿಯಲ್ಲಿ ಕೂತಿರುವ ಹೈಕಮಾಂಡ್ ಗೆ ರಾಜ್ಯವನ್ನು ಎಟಿಎಂ ಮಾಡುವ ಹುನ್ನಾರ ನಡೆಸಿದೆ. ಎಲ್ಲಾ ಯೋಜನೆಗಳಲ್ಲಿಯೂ ಶೇ.85ರಷ್ಟು ಭ್ರಷ್ಟಾಚಾರ ನಡೆಸುತ್ತದೆ. ಜೆಡಿಎಸ್ ಕೂಡ ಕಚ್ಚೆ-ಪಂಚೆ ಪಕ್ಷವಾಗಿದೆ ಎಂದು ಟೀಕಿಸಿದರು. ಕಾಂಗ್ರೆಸ್ ರಾಜ್ಯದಲ್ಲಿ ಅಶಾಂತಿ ಹುಟ್ಟು ಹಾಕುತ್ತಿದೆ. ಅಭಿವೃದ್ಧಿಗೆ ವಿರುದ್ಧವಾಗಿದೆ. ಆತಂಕವಾದಿಗಳನ್ನು ರಕ್ಷಿಸುವ ಪಕ್ಷ ಕಾಂಗ್ರೆಸ್. ತುಷ್ಟೀಕರಣ ನೀತಿ ಅನುಸರಿಸುತ್ತದೆ. ಇಂತಹ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆ? ಎಂದು ಪ್ರಶ್ನಿಸಿದ್ದಾರೆ.