ಮ್ಯಾಚ್ ನಂತರ ಮೈದಾನದಲ್ಲೇ ಕಿತ್ತಾಡಿದ ಕೊಹ್ಲಿ-ಗಂಭೀರ್: ಶೇಕಡಾ 100 ರಷ್ಟು ದಂಡ 03-05-2023 7:53AM IST / No Comments / Posted In: Featured News, Live News, Sports ಮೊನ್ನೆ ನಡೆದ ಐಪಿಎಲ್ ಮ್ಯಾಚ್ ಅಂತೂ ಯಾರೂ ಮರೆಯೊ ಹಾಗಿಲ್ಲ. ಅದರಲ್ಲೂ ಮ್ಯಾಚ್ ಮುಗಿದ ನಂತರ ಆರ್‌ಸಿಬಿ ಆಟಗಾರ ವಿರಾಟ್ ಕೊಹ್ಲಿ ಹಾಗೂ ಲಖನೌ ಮೆಂಟರ್ ಗೌತಮ್ ಗಂಭೀರ್ ನಡುವೆ ನಡೆದ ಮಾತಿನ ಚಕಮಕಿ ಹಳೇ ಸೇಡಿಗೆ ತಿರುಗೇಟು ಕೊಟ್ಟಂತಿತ್ತು. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಹೈಲೆಟ್ ಆಗಿದ್ದು ಮಿಸ್ಟರ್ ಗೌತಮ್ ಗಂಭೀರ್, ಕಾರಣ ಸ್ಟೇಡಿಯಂನಲ್ಲಿದ್ದ ಆರ್‌ಸಿಬಿ ತಂಡದ ಅಭಿಮಾನಿಗಳಿಗೆ ಬಾಯಿ ಮೇಲೆ ಬೆರಳಿಟ್ಟು, ಬಾಯಿ ಮುಚ್ಚುವಂತೆ ತಿಳಿಸಿದ್ದರು. ಅಲ್ಲಿ ರೊಚ್ಚಿಗೆದ್ದ ಆರ್‌ಸಿಬಿ ತಂಡದ ಹಿರಿಯ ಆಟಗಾರ ವಿರಾಟ್ ಕೊಹ್ಲಿ ಮೊನ್ನೆ ನಡೆದ ಪಂದ್ಯದಲ್ಲಿ ಉತ್ತರ ಕೊಟ್ಟಿದ್ದರು. ಅಷ್ಟೆ ಅಲ್ಲ ಪಂದ್ಯದ ಬಳಿಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಮೈದಾನದಲ್ಲೇ ಕೈ-ಕೈ ಮಿಲಾಯಿಸೋ ಮಟ್ಟದಲ್ಲಿ ಕಿತ್ತಾಡಿಕೊಂಡರು. ಇದು ಹಳೇ ದ್ವೇಷಕ್ಕೆ ಮತ್ತೆ ಕಿಚ್ಚು ಹೊತ್ತಿಕೊಂಡಂತಿತ್ತು. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಉಲ್ಲಂಘಿಸಿದ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಇಬ್ಬರಿಗೂ ಸಹ ಪಂದ್ಯದ ಸಂಭಾವನೆಯ ಶೇ 100ರಷ್ಟು ದಂಡ ವಿಧಿಸಲಾಗಿದೆ. ಗೌತಮ್ ಗಂಭೀರ್ ಅವರು ಆರ್ಟಿಕಲ್ 2.21 ಅಡಿಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ. ಲೆವಲ್ 2 ನಿಯಮ ಉಲ್ಲಂಘಿಸಿದ ಕಾರಣ ಶೇ.100ರಷ್ಟು ದಂಡ ವಿಧಿಸಲಾಗಿದೆ. ಇನ್ನೂ ಕೊಹ್ಲಿ ಕೂಡಾ ಆರ್ಟಿಕಲ್ 2.21 ನಿಯಮದಡಿಯಲ್ಲಿ ಲೆವಲ್ 2 ನಿಯಮ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರು ಸಹ ಶೇಕಡಾ 100ರಷ್ಟು ದಂಡ ವಿಧಿಸಲಾಗಿದೆ. ಇವರಿಬ್ಬರ ಹೊರತಾಗಿ ಲಖನೌ ತಂಡದ ಆಟಗಾರ ನವೀನ್ ಉಲ್ ಹಕ್, ಪಂದ್ಯದ ನಂತರ ವಿರಾಟ್ ಕೊಹ್ಲಿ ಜೊತೆ ಹ್ಯಾಂಡ್ ಶೇಕ್ ವೇಳೆ, ತಮ್ಮ ಆಕ್ರೋಶವನ್ನ ಹೊರಹಾಕಿದ್ದಾರೆ. ಕೋಡ್ ಆಫ್ ಕಂಡಕ್ಟನ ಆರ್ಟಿಕಲ್ ಪ್ರಕಾರ 2.21 ನಿಯಮದಡಿ ಲೆವಲ್ 1 ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ ಶೇಕಡಾ 50ರಷ್ಟು ದಂಡವನ್ನ ವಿಧಿಸಲಾಗಿದೆ. Full Virat vs Gambhir Drama #LSGvRCB #ViratKohli𓃵 #gambhir #gautamgambhir #naveenulhaq #IPL2O23 #ipl #RCBvLSG #AnushkaSharma #Gauti #AmitMishra #KLRahul #RCBCRICKET AT PEAK 🔥🔥 pic.twitter.com/9F8Dai1LjY — Ping Mike (@usernamefound12) May 1, 2023