ಹಲವು ಜನರ ಪ್ರತಿಭೆಗಳು ಸಾಮಾನ್ಯವಾಗಿ ಬೆಳಕಿಗೆ ಬರೋದೇ ಇಲ್ಲ. ಯಾಕೆಂದರೆ ಇದೀಗ ವೈರಲ್ ಆಗಿರುವ ವಿಡಿಯೋ ಅಂತರ್ಜಾಲದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಹಳೆಯ ಕಾರಿನ ಬಂಪರ್‌ಗೆ ಜೋಡಿಸಲಾದ ಪಂಜರದಂತಹ ಕಂಟೈನರ್‌ನಲ್ಲಿ ಮೂವರು ಮಕ್ಕಳು ಪ್ರಯಾಣಿಸುವ ವಿಲಕ್ಷಣ ದೃಶ್ಯ ಕಂಡು ನೆಟ್ಟಿಗರು ಅಚ್ಚರಿಗೊಂಡಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲಿ ಈ ಘಟನೆ ನಡೆದಿದೆ. ಮಧ್ಯಮ ವರ್ಗದ ಕುಟುಂಬದ ಕಥೆ ನಿಮಗೆ ಗೊತ್ತೇ ಇರಬಹುದು. ಒಂದೇ ಕಾರಿನಲ್ಲಿ ಎಷ್ಟು ಜನರನ್ನು ತುಂಬಿಸಲು ಸಾಧ್ಯವಾಗುತ್ತೋ ಅಷ್ಟು ಜನರನ್ನು ಕೂರಿಸಿ ಕರೆದೊಯ್ಯುತ್ತಾರೆ. ಮಕ್ಕಳಿದ್ದರಂತೂ ಅವರಿಗೆ ಕಾರಿನ ಡಿಕ್ಕಿಯೇ ಗತಿ. ಇಲ್ಲಾಗಿದ್ದು ಕೂಡ ಅದೇ. ಹೌದು, ಕರಾಚಿಯಲ್ಲಿನ ಒಂದು ಕುಟುಂಬವು ಒಂದು ಕಾರಿನಲ್ಲಿ ಕುಳಿದುಕೊಳ್ಳಲು ಸಾಧ್ಯವಾಗದಷ್ಟು ಕುಟುಂಬ ಸದಸ್ಯರನ್ನು ಹೊಂದಿರುವಂತೆ ತೋರುತ್ತಿದೆ. ಹೀಗಾಗಿ ಮೂವರು ಮಕ್ಕಳನ್ನು ಡಿಕ್ಕಿಯಲ್ಲಿ ಕೂರಿಸಲಾಗಿದೆ.
ಇನ್‌ಸ್ಟಾಗ್ರಾಮ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಾಹನದ ಹಿಂದೆ ಚಾಲನೆ ಮಾಡುತ್ತಿದ್ದ ಮತ್ತೊಬ್ಬ ಪ್ರಯಾಣಿಕರು ಈ ವಿಡಿಯೋವನ್ನು ರೆಕಾರ್ಡ್ ಮಾಡಿದ್ದಾರೆ. ವಾಹನವು ಜನರಿಂದ ತುಂಬಿ ತುಳುಕುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಕಾರಿನ ಹಿಂದೆ ಬಂಪರ್ ನಲ್ಲಿ ಪಂಜರದಂತೆ ಮಾಡಿ ಅದರಲ್ಲಿ ಮಕ್ಕಳನ್ನು ಕೂರಿಸಿ ಕರೆದೊಯ್ದಿದ್ದಾರೆ. ಸದ್ಯ, ಈ ವಿಡಿಯೋ ಸಖತ್ ವೈರಲ್ ಆಗಿದೆ. ಕೆಲವರು ನಕ್ಕರೆ, ಇನ್ನು ಕೆಲವರು ಈ ರೀತಿ ಮಕ್ಕಳನ್ನು ಸಾಗಿಸಿದ್ದಕ್ಕಾಗಿ ವಾಹನದ ಮಾಲೀಕರನ್ನು ಬಂಧಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ.