ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಆಘಾತಕಾರಿ ಬೆಳವಣಿಗೆ ಬೆಳಕಿಗೆ ಬಂದಿದ್ದು, ಕೆಲವು ಪೋಷಕರು ತಮ್ಮ ಹೆಣ್ಣುಮಕ್ಕಳ ಸಮಾಧಿಗೆ ಕಬ್ಬಿಣದ ಗೇಟ್ ಮಾಡಿಸಿ ಬೀಗ ಹಾಕಿ ಅತ್ಯಾಚಾರಕ್ಕೆ ಒಳಗಾಗದಂತೆ ರಕ್ಷಿಸಲು ಮುಂದಾಗಿದ್ದಾರೆ.
ಈ ಸಮಸ್ಯೆಯನ್ನು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೈಲೈಟ್ ಮಾಡಿದ್ದಾರೆ. ಮಾಜಿ ಮುಸ್ಲಿಂ ನಾಸ್ತಿಕ ಕಾರ್ಯಕರ್ತ ಹ್ಯಾರಿಸ್ ಸುಲ್ತಾನ್ ಎಂಬ ಅಂತಹ ಬಳಕೆದಾರರೊಬ್ಬರು. ಅವರು, ಪಾಕಿಸ್ತಾನವು ಎಷ್ಟು ಲೈಂಗಿಕವಾಗಿ ಹತಾಶೆಗೊಂಡ ಸಮಾಜವನ್ನು ಸೃಷ್ಟಿಸಿದೆ ಎಂದರೆ ಜನರು ಈಗ ತಮ್ಮ ಹೆಣ್ಣುಮಕ್ಕಳು ಅತ್ಯಾಚಾರಕ್ಕೊಳಗಾಗುವುದನ್ನು ತಡೆಯಲು ಅವರ ಸಮಾಧಿಗಳಿಗೆ ಬೀಗ ಹಾಕುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ನೆಕ್ರೋಫಿಲಿಯಾ ಪ್ರಕರಣ ಹೆಚ್ಚಳ
ವರದಿಗಳ ಪ್ರಕಾರ ಪಾಕಿಸ್ತಾನದಲ್ಲಿ ದೇಶದಲ್ಲಿ ನೆಕ್ರೋಫಿಲಿಯಾ(ಶವಗಳ ಮೇಲೆ ಲೈಂಗಿಕ ಲಾಲಸೆ) ಪ್ರಕರಣಗಳು ಹೆಚ್ಚುತ್ತಿವೆ. ಕುಟುಂಬ ಆಧಾರಿತ ಮೌಲ್ಯಗಳ ಬಗ್ಗೆ ಹೆಮ್ಮೆಪಡುವ ದೇಶದಲ್ಲಿ ಪ್ರತಿ ಎರಡು ಗಂಟೆಗಳಿಗೊಮ್ಮೆ ಮಹಿಳೆಯೊಬ್ಬಳು ಅತ್ಯಾಚಾರಕ್ಕೊಳಗಾಗುತ್ತಾಳೆ ಎಂಬ ಹಂತಕ್ಕೆ ಬಂದಿದೆ. ಆದರೆ ಹೆಣ್ಣಿನ ಸಮಾಧಿಯ ಮೇಲೆ ಬೀಗ ಹಾಕಿರುವ ಹೃದಯ ವಿದ್ರಾವಕ ದೃಶ್ಯವು ಇಡೀ ಸಮಾಜ ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದು ಹೇಳಲಾಗಿದೆ.