ಕಲಬುರ್ಗಿ: ಯುವಕನೊಬ್ಬ ಕೆಲಸದ ಒತ್ತಡದಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರ್ಗಿ ಜಿಲ್ಲೆಯ ವಿಶ್ವವಿದ್ಯಾಲಯದ ಆವರಣದ ಪಾಳುಬಿದ್ದ ಗೋಡಾನ್ ನಲ್ಲಿ ನಡೆದಿದೆ.
22 ವರ್ಷದ ಶಶಾಂಕ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಜ್ಯೋತಿಬಾಪುಲೆ ಬಡಾವಣೆಯ ನಿವಾಸಿ. ಆನ್ ಲೈನ್ ಎನಿಮೇಷನ್ ಕೆಲಸ ಮಾಡುತ್ತಿದ್ದ ಶಶಾಂಕ್, ಕೆಲಸದ ಒತ್ತಡಕ್ಕೆ ಸಿಲುಕಿ ಮನನೊಂದಿದ್ದ. ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.