ತೆರೆದ ನಾಲೆಗೆ ಬಿದ್ದು ನಾಲ್ಕು ವರ್ಷದ ಬಾಲಕಿ ಸಾವನ್ನಪ್ಪಿರೋ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಲಸಿಗುಡಾ ನಿವಾಸಿ ಮೌನಿಕಾ ಎಂದು ಗುರುತಿಸಲಾಗಿರುವ ನಾಲ್ಕು ವರ್ಷದ ಬಾಲಕಿ ತನ್ನ ಸಹೋದರನೊಂದಿಗೆ ಹಾಲಿನ ಪ್ಯಾಕೆಟ್ ಖರೀದಿಸಲು ಹೋಗುತ್ತಿದ್ದಾಗ ನಾಲೆಗೆ ಬಿದ್ದಿದ್ದಾಳೆ. ಈ ವೇಳೆ ನೀರಿನಲ್ಲಿ ಆಕೆ ಕೊಚ್ಚಿಕೊಂಡು ಹೋದಳು.
ಶನಿವಾರ ಬೆಳಿಗ್ಗೆ 7:30 ರ ಸುಮಾರಿಗೆ, ಮೌನಿಕಾ ಎಂದು ಗುರುತಿಸಲ್ಪಟ್ಟಿರುವ ಹುಡುಗಿ ತನ್ನ ಸಹೋದರನೊಂದಿಗೆ ಹಾಲಿನ ಪ್ಯಾಕೆಟ್ ತೆಗೆದುಕೊಳ್ಳಲು ಹೊರಗೆ ಹೋಗಿದ್ದಳು, ಅವಳು ದಾರಿಯಲ್ಲಿ ಹೋಗುತ್ತಿದ್ದಾಗ, ಕಲಾಸಿಗುಡ ಶಾಲೆಯ ಬಳಿ ತೆರೆದ ನಾಲೆಗೆ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ.
ಮೃತದೇಹವನ್ನು ಹೊರತೆಗೆಯಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಡಿಆರ್‌ಎಫ್ ತಂಡ ಮತ್ತು ಸ್ಥಳೀಯ ಪೊಲೀಸರು ಭಾರಿ ಶೋಧವನ್ನು ಆರಂಭಿಸಿದರು. ಅಂತಿಮವಾಗಿ ಶವವನ್ನು ಪತ್ತೆ ಹಚ್ಚಿ ಹೊರತೆಗೆದರು. ಜಿಎಚ್‌ಎಂಸಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೌನಿಕಾ ಸಾವನ್ನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.